ಕೆಲವು ಪದಗಳಿಂದಲೇ ಸಮಾಜ ತಿದ್ದುವ ಸಾಹಿತ್ಯ ಬರೆದವರು ನಾಗಪ್ಪ ತ್ರಿವೇದಿ: ಜಾಲವಾದಿ

0
64

ಸುರಪುರ: ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವ ಸಾಹಿತ್ಯವನ್ನು ರಚಿಸುವವರು ನಿಜವಾದ ಸಾಹಿತಿಗಳು ಅಂತಹ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ ಸಾಹಿತಿ ಎಂದರೆ ನಾಗಪ್ಪ ತ್ರಿವೇದಿಯವರು.ಕೆಲವು ಪದಗಳಿಂದಲೇ ಸಾಂಜ ತಿದ್ದುವ ಸಾಹಿತ್ಯ ಬರೆದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಚುಟುಕು ಸಾಹಿತಿ ನಾಗಪ್ಪ ತ್ರಿವೇದಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ತ್ರಿವೇದಿಯವರಂತ ಸಾಹಿತಿಗಳು ಸಿಗುವುದು ಅಪರೂಪ ಅಂತಹ ಸಾಹಿತಿ ನಮ್ಮ ನಡುವೆ ಇದ್ದರು ಎಂಬುದೆ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿತ್ತು.ಇಂದು ಅವರು ನಮ್ಮನ್ನೆಲ್ಲ ಅಗಲಿದ್ದು ನೋವಿನ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ನಾಗಪ್ಪ ತ್ರಿವೇದಿ ಸರ್ ಅವರು ಕೇವಲ ಸಾಹಿತಿ ಮಾತ್ರವಲ್ಲದೆ ಅವರೊಬ್ಬ ಆದರ್ಶ ಶಿಕ್ಷಕರಾಗಿದ್ದರು,ಅವರು ಅಂದು ಕಲಿಸಿದ ಪಾಠಗಳು ನಮಗೆ ಇಂದಿಗೂ ನೆನಪಲ್ಲಿ ಉಳಿದಿರುವುದೆ ಸಾಕ್ಷಿಯಾಗಿದೆ.ಅಂತಹ ಒಬ್ಬ ಕರ್ತವ್ಯ ನಿಷ್ಠ ಸಮಾಜ ತಿದ್ದಿದ ಶಿಕ್ಷಕ ಇಂದು ನಮ್ಮನ್ನು ಅಗಲಿದ್ದು ದುಃಖದ ಸಂಗತಿಯಾಗಿದೆ ಎಂದರು.

ಮಾಜಿ ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಮಾತನಾಡಿ,ತ್ರಿವೇದಿಯವರು ನನ್ನ ಆತ್ಮಿಯ ಒಡನಾಡಿಯಾಗಿದ್ದರು.ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದಿದೆ,ಅವರ ಸಾಹಿತ್ಯವುಕೂಡ ಅಷ್ಠೆ ಮೇರುತನದಿಂದ ಕೂಡಿದೆ.ಇಂದು ಅವರು ನಮ್ಮನ್ನು ಬಿಟ್ಟು ಹೋಗಿದ್ದು ಅವರ ಸಾಹಿತ್ಯ ಮಾತ್ರ ನಮ್ಮ ನಡುವೆ ಜೀವಂತವಾಗಿದೆ.ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ನಾಗಪ್ಪ ತ್ರಿವೇದಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಹಾಕಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.ಮುಖಂಡ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಘವೇಂದ್ರ ಬಾಡಿಯಾಳ,ಲಕ್ಷ್ಮಣ ಗುತ್ತೇದಾರ,ಮುದ್ದಪ್ಪ ಅಪ್ಪಾಗೋಳ,ನಿಂಗಣ್ಣ ಚಿಂಚೋಡಿ,ನಬಿಲಾಲ ಮಕಾಂದಾರ,ಬಸವರಾಜ ರುಮಾಲ,ಬೀರಣ್ಣ ಆಲ್ದಾಳ, ಕೆ.ವೀರಪ್ಪ, ಯಲ್ಲಪ್ಪ ನಾಯಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಯಲ್ಲಪ್ಪ ಹುಲಕಲ್,ಎಂ.ಡಿ.ಸರ್ವರ್,ಬಸವರಾಜ ಗೋಗಿ,ಸೋಮರಡ್ಡಿ ಮಂಗಿಹಾಳ,ಶರಣಬಸವ ಯಾಳವಾರ,ಹೆಚ್.ರಾಠೋಡ,ವೆಂಕಟೇಶ ಗೌಡ,ಕನಕಪ್ಪ ವಾಗಣಗೇರಾ,ಗೋಪಣ್ಣ ಯಾದವ್,ಶಿವಕುಮಾರ ಕಮತಗಿ,ಹಸಿನಾಬಾನು ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here