ಕಲಬುರಗಿ: ಓದಿನಲ್ಲಿ ಕೊಂಚ ದಡ್ಡರಿರುವ ಮಕ್ಕಳನ್ನು ಕಡೆಗಣಿಸಬಾರದು, ಅವರಲ್ಲಿಯೂ ಪ್ರತಿಭೆಯಿರುತ್ತದೆ, ಅದನ್ನು ಗುರುತಿಸುವ ಮೂಲಕ ಪ್ರೋತ್ಸಾಹ ನೀಡಿದರೆ, ದಡ್ಡ ವಿದ್ಯಾರ್ಥಿಗಳು ಸಹ ಥಾiಸ್ ಅಲ್ವಾ ಎಡಿಸನ್ ಬಲ್ಬ ಕಂಡು ಹಿಡಿದು ಜಗವ ಬೆಳಗಿದಂತೆ ಏನಾದರೂ ಹೊಸದನ್ನು ಆವಿಷ್ಕಾರ ಮಾಡುವ ಮೂಲಕ ಜಗಕೆ ಬೆಳಕಾಗುತ್ತಾರೆ ಎಂದು ತೊನಸನಳ್ಳಿಯ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕೆಸರಟಗಿ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಯಕ ಕಾಲೇಜಿನ ಕ್ಯಾಂಪಸ್‌ನಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾಯಕ ಫೌಂಡೇಶನ್ ಪ್ರಾಥಮಿಕ ಮತ್ತು ವಸತಿ ಪ್ರೌಢಶಾಲೆ ಹಾಗೂ ಕಾಯಕ ವಸತಿ ವಿeನ – ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾಯಕ ಸಂಭ್ರಮ-೧೧ ಹಾಗೂ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದ ಸನ್ನಿಧಾನ ವಹಿಸಿ ಮಾತನಾಡಿ. ಮಕ್ಕಳನ್ನು ಪ್ರೀತಿಯಿಂದ ಹುರಿದುಂಬಿಸಿದರೆ ಸಾಧನೆ ಮಾಡುತ್ತಾರೆ. ಪ್ರೋತ್ಸಾಹಿಸುವುದು ಔಷಧಿಯಂತೆ ಕೆಲಸ ಮಾಡಲಿದೆ ಎಂದರು.
* ಮಂತ್ರಮುಗ್ಧಗೊಳಿಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
* ನಾಲ್ವರು ಶ್ರೀಗಳಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ
*ತಾಯಿ ಹಿರಿಮೆ ಸಾರುವ ಹಾಡುಗಳಿಗೆ ಮಕ್ಕಳ ಹೆಜ್ಜೆ
*ಹೆಣ್ಮಕ್ಕಳಿಗೆ ಸ್ವಯಂ ರಕ್ಷಣೆ ಕುರಿತು ಅಣಕು ಪ್ರದರ್ಶನ
*ಹೆತ್ತವರ ಅಕ್ಕರೆಯಿಂದ ನೋಡುವುದೇ ಪುಣ್ಯದ ಕೆಲಸ
ಕಾಯಕ ಫೌಂಡೇಷನ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಲು ಕಾರಣರಾದವರು ದೇವದುರ್ಗದ ಮಾಜಿ ಶಾಸಕರಾಗಿದ್ದ ತೇಜಪ್ಪಗೌಡ ಪಾಟೀಲ್‌ರ ಪತ್ನಿ ಲಿಂಗೈಕ್ಯ ಶಾಂತಾದೇವಿ ಪಾಟೀಲ ಕಾರಣ. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶಿವರಾಜ ಪಾಟೀಲ್ ಸಹೋದರರು ಈ ಸಂಸ್ಥೆಯನ್ನು ಕಟ್ಟಿ ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಕಾಯಕ-ದಾಸೋಹ ಸೂತ್ರಗಳನ್ನು ಪಾಲಿಸಿಕೊಂಡು ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತಕ್ಕೇರಲಿದೆ ಎಂದು ಸ್ವಾಮೀಜಿಗಳು ಹಾರೈಸಿದರು.
ತಾಯಿಗಿಂತಲೂ ಮಿಗಿಲು ಬೇರೊಬ್ಬರಿಲ್ಲ
ವಿಶ್ವದಲ್ಲಿ ತಾಯಿಗಿಂತಲೂ ಮಿಗಿಲಾಗಿರುವವರು ಮತ್ತೊಬ್ಬರಿಲ್ಲ. ತಾಯಿಯೇ ಎಲ್ಲವೂ ಹೀಗಾಗಿ ನಿಮ್ಮ ಹೆತ್ತವರನ್ನು ಅತ್ಯಂತ ಪ್ರೀತಿ-ಅಕ್ಕರೆಯಿಂದ ನೋಡಿ ಎಂದು ವಿದ್ಯಾರ್ಥಿಗಳಿಗೆ ಕಾಯಕ ಫೌಂಡೇಷನ್ ಕಾಲೇಜಿನ ಸಂಸ್ಥಾಪಕ ಶಿವರಾಜ.ಟಿ.ಪಾಟೀಲ್ ಹೇಳಿದರು. ಕಾಯಕ ಸಂಭ್ರಮದಲ್ಲಿ ಮಾತನಾಡಿ, ನಾವೇ ಕಟ್ಟಿ ಬೆಳೆಸಲು ಶ್ರಮಿಸಿದ್ದ ಇನ್ನೊಂದು ಸಂಸ್ಥೆಯಿಂದ ನಾನು ಹೊರ ಹಾಕಲ್ಪಟ್ಟಾಗ, ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ನಿರ್ಧರಿಸಿದ್ದೆ. ಆದರೆ, ನನ್ನ ತಾಯಿ ಶಾಂತಾದೇವಿ ಟಿ.ಪಾಟೀಲ್ ವಿದೇಶಕ್ಕೆ ಹೋಗದಂತೆ ತಡೆದರು. ತಾಯಿ ಮತ್ತು ಸಹೋದರರು ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಪ್ರೋತ್ಸಾಹಿಸಿದರು ಹೇಳುವಾಗ ಶಿವರಾಜ ಪಾಟೀಲ್ ಭಾವುಕರಾದರು. ಬೆನ್ನು ಹಿಂದೆ ನಿಂತು ಬೆಂಬಲಸಿದರು. ಅದರ ಪರಿಣಾಮವಾಗಿಯೇ ಇಂದು ಕಾಯಕ ಫೌಂಡೇಷನ್ ಸಂಸ್ಥೆ ಬೆಳೆದು ನಿಂತಿದೆ. ಇದಕ್ಕೆ ನನ್ನ ತಾಯಿ ಸ್ಪೂರ್ತಿ. ಹೀಗಾಗಿ ಈ ಕಾರ್ಯಕ್ರಮ ಅವರ ಸ್ಮರಣೆಯಲ್ಲಿಯೇ ಮಾಡುವ ಉzಶದಿಂದ ಆಡಂಭರ ಬದಲಿಗೆ ಆರ್ಥಪೂರ್ಣ ಆಚರಿಸುತ್ತಿzವೆ. ಅವರು ಪೂಜಿಸುತ್ತಿದ್ದ ಸ್ವಾಮೀಜಿಗಳಿಗೆ ಗೌರವಿಸುತ್ತಿzವೆ ಎಂದರು.
ಸಮಾರಂಭದ ಸನ್ನಿಧಾನವನ್ನು ವಹಿಸಿದ್ದ ಪಾಳಾದ ಮೂಲಕಟ್ಟಿಮನಿ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಓಂಕಾರಬೇನೂರಿನ ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿ, ಬಬಲಾದಿನ ಶ್ರೀಮದ್ ರಂಭಾಪುರಿ ಶಾಖಾ ಬೃಹ್ಮಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಮತ್ತು ತೊನಸನಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಸ್ವಾಮೀಜಿಗಳಿಗೆ ಕಾಯಕ ಫೌಂಡೇಷನ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಕಾಯಕ ಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾಯಕ ಏಜುಕೇಷನಲ್ ಟ್ರಸ್ಟ್ ಸಪ್ನರಡ್ಡಿ ಪಾಟೀಲ್ ಸ್ವಾಗತಿಸಿದರು. ಕಾಯಕ ಫೌಂಡೇಷನ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾನೂನು ಸಲಹೆಗಾರರಾದ ಬಸವರಾಜ ಬಿರಾದಾರ ಸೊನ್ನ, ಖ್ಯಾತ ವಾಸ್ತುಶಿಲ್ಪಿ ಸುಮಾ ಬೆಂಗಳೂರು, ಕಾಲೇಜಿನ ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ವೈಶಾಲಿ ಗೋಟಗಿ, ಕಾಲೇಜಿನ ಹಿರಿಯ ಶೈಕ್ಷಣಿಕ ನಿರ್ದೇಶಕ ಕೇಶಲು ಸ್ವಾಮಿ, ಆಡಳಿತಾಧಿಕಾರಿ ಗೋವಿಂದ ಕುಲಕರ್ಣಿ, ಮಹಾಂತೇಶ ಪಾಟೀಲ್, ಉಪ ಪ್ರಾಚಾರ್ಯ ಪ್ರವೀಣಕುಮಾರ, ವಾಜಿನ್ಯ ವಿಭಾಗದ ಪ್ರಾಚಾರ್ಯ ಮಹ್ಮದ ಅಜಂ, ಪ್ರೀತಿ ಬಿರಾದಾರ ಮೊದಲಾದವರಿದ್ದರು.
ಸಮಾರಂಭದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ರ‍್ಯಾಂಕ್ ಪಡೆದವರಿಗೆ, ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಹೇಗೆ ದುಷ್ಜರ್ಮಿಗಳ ದಾಳಿ, ಅಸಿಡ್ ಮೊದಲಾದ ದಾಳಿ ಮಾಡಿದ ಸಂದರ್ಭ ದಲ್ಲಿ ಹೇಗೆ ರPಣೆ ಮಾಡಿಕೊಳ್ಳಬಹುದು, ಸ್ವಯಂ ರಕ್ಷಣೆಗೆ ಕರಾಟೆ ಮೊದಲಾದವರ ಕುರಿತು ವಿದ್ಯಾರ್ಥಿಗಳು ನೀಡಿದ ಅಣಕು ಪ್ರದರ್ಶನಗಳು ಗಮನ ಸೆಳೆದವು. ಇಡಿ ಕಾರ್ಯಕ್ರಮವನ್ನು ಲಿಂಗೈಕ್ಯ ಶಾಂತಾದೇವಿ ಪಾಟೀಲ್‌ರಿಗೆ ಸಮರ್ಪಿಸಿದ್ದರಿಂದ ತಾಯಿಯ ಮೌಲ್ಯ ಬಿಂಬಿಸುವ ಹಲವು ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆ ಮಾಡಿದವು. ಶಿಕ್ಷಕರು, ಸಿಬ್ಬಂದಿ,ಮಕ್ಕಳು ಮತ್ತು ಪೋಷಕರು ಪಾಲ್ಗೊಂಡಿದ್ದರು.