ಆಳಂದ: ತಾಲೂಕಿನ ಖಜೂರಿ ಗ್ರಾಮದ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪ್ಯಾನೆಲನ ೧೦ ಜನ ಭರ್ಜರಿ ಜಯ ಗಳಿಸುವುದರ ಮೂಲಕ ಸಹಕಾರಿ ಸಂಘದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ.
ಒಟ್ಟು ೧೨ ಸ್ಥಾನಗಳಿದ್ದು ಅದರಲ್ಲಿ ೨ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಚುನಾವಣೆ ನಡೆದ ೧೦ ಸ್ಥಾನಗಳ ಪೈಕಿ ಎಲ್ಲ ೧೦ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿಗರು ಜಯ ಗಳಿಸಿದ್ದಾರೆ. ಅವಿರೋಧ ಆಯ್ಕೆಯಾದ ಆ ಇಬ್ಬರೂ ಸದಸ್ಯರು ಬಿಜೆಪಿ ಬೆಂಬಲಿತರೆ ಆಗಿದ್ದಾರೆ.
ಅಶೋಕ ಸಾವಳೇಶ್ವರ, ಉದಯಕುಮಾರ ಕಂದಗೂಳೆ, ಗಾಂಧಿ ಘಂಟೆ, ಮಲ್ಲಿನಾಥ ವಾನೇಗಾಂವ, ದಯಾನಂದ ಚವ್ಹಾಣ, ಬಸವರಾಜ ಸುತಾರ, ಗುರುಬಸಪ್ಪ ಶಿರೋಳೆ, ಮಹಾನಂದಾ ಬಂಗರಗೆ, ಸಿದ್ದಮ್ಮಾ ಢಗೆ, ಗುಣಮಂತ ಢಗೆ ಚುನಾವಣೆಯಲ್ಲಿ ಜಯಶೀಲರಾಗಿದ್ದರೇ, ಕಲ್ಯಾಣಿ ಜಮಾದಾರ, ಲಕ್ಷ್ಮಣ ಕಟ್ಟಿಮನಿ ಅವಿರೋಧ ಆಯ್ಕೆಯಾಗಿದ್ದಾರೆ.