ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರತಿನಿಧಿ ಸಭೆ: 5 ಅಂಶಗಳ ನಿರ್ಣಯ ಅಂಗೀಕಾರ

0
52

ದಕ್ಷಿಣ ಕನ್ನಡ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ‘ಅಸ್ಮಿತೆಗಾಗಿ ಪ್ರತಿರೋಧ’ ಎಂಬ ಘೋಷಣೆಯೊಂದಿಗೆ ಎರಡು ದಿವಸಗಳ ರಾಜ್ಯ ಪ್ರತಿನಿಧಿ ಸಭೆಯು ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಭವನದಲ್ಲಿ ನಡೆಯಿತು.

ಸಭೆಯನ್ನು ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಧ್ವಜಾರೋಹನ ಮಾಡುವ ಮೂಲಕ ಚಾಲನೆಗೈದರು. ರಾಷ್ಟ್ರೀಯ ಉಪಾಧ್ಯಕ್ಷೆ ನಫೀಸತುಲ್ ಮಿಶ್ರಿಯಾ ಉದ್ಘಾಟನಾ ಭಾಷಣ ಮಾತನಡಿ ‘ಪ್ರಸಕ್ತ ಸನ್ನಿವೇಶದಲ್ಲಿ ಯುವ ಸಮುದಾಯವು ಹೋರಾಟಗಳನ್ನು ಮಾಡುತ್ತಾ ಫ್ಯಾಶಿಸ್ಟ್ ಸರಕಾರದ ವಿರುದ್ದ ಚಳುವಳಿಗೆ ಕರೆ ನೀಡಿದೆ. ಈ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ ಇಳಿಯುತ್ತಿದ್ದು ಇದು ವಿಜಯದ ಸಂಕೇತವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ ‘ದೇಶಾದ್ಯಂತ ಸರಕಾರದ ವಿರುದ್ದ ಅಸ್ಮಿತೆಯನ್ನು ಉಳಿಸುವ ಹೋರಾಟ ನಡೆಯುತ್ತಿದೆ ಆದರೆ ಸರಕಾರಗಳು ವ್ಯವಸ್ಥೆಯ ಮುಖಾಂತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಹೋರಾಟದಲ್ಲಿ ಮುಂದುವರಿಯುವಾಗ  ಯಾವುದೇ ಅಡೆತಡೆಗಳು ಬಂದರೂ ಅಸ್ಮಿತೆಯನ್ನು ಉಳಿಸಲು ಯಾವುದೇ ರೀತಿಯ ಪ್ರತಿರೋಧಕ್ಕೆ ಯುವಜನರು ಇಳಿಯಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಫ್ಯಾಶಿಸ್ಟ್ ಸರಕಾರದ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಕಟಿಬದ್ದವಾಗಿದೆ ಎಂದು ಹೇಳಿದರು.

ಎರಡು ದಿವಸದ ಪ್ರತಿನಿಧಿ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ  ಮತ್ತು ವಿಶ್ವವಿದ್ಯಾನಿಲಯಗಳಿಂದ  ಪ್ರತಿನಿಧಿಗಳು ಬಾಗವಹಿಸಿದರು. ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಲ್ಲದೇ ರಾಜ್ಯ ಎದುರಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಂಘಟನೆಯ ಮುಂದಿನ ನಡೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷರಾದ ಮುಹಮ್ಮದ್ ಶಾಕೀರ್ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ವಾರ್ಷಿಕ ವರದಿ ವಾಚಿಸಿದರು.ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ರಿಯಾಝ್ ಪಾಷಾ, ಉಪಾಧ್ಯಕ್ಷ ಅಡ್ವೋಕೇಟ್ ಮುಹಮ್ಮದ್ ಆರಿಫ್, ಕಾರ್ಯದರ್ಶಿಗಳಾದ ಅಥಾವುಲ್ಲಾ, ಅಶ್ವಾನ್ ಸಾದಿಕ್, ಅಶ್ರಫ್ ದಾವಣಗೆರೆ, ಕೋಶಾಧಿಕಾರಿ ಮುಬಾರಕ್ ಉಪಸ್ಥಿತರಿದ್ದರು.ಸಮಿತಿ ಸದಸ್ಯೆ ಶೈಮಾ ಸರೀಫ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತಿನಿಧಿ ಸಭೆಯಲ್ಲಿ ಸ್ಟುಡೆಂಟ್ ಆಕ್ಟಿವಿಸಮ್ ಎಂಬ ವಿಷಯದಲ್ಲಿ ‘ಸಿಂಪೋಸಿಯಮ್’ ಚರ್ಚಾಕೂಟ ನಡೆಯಿತು. ಚರ್ಚೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರ್ಶಕ್ ವಯಕಾಡ್, ಪಿ.ಎ ಕಾಲೇಜಿನ ಪ್ರೊಫೆಸರ್ ಸಯ್ಯದ್ ಅಮೀನ್,ಎಚ್ ಆರ್ ಡಿ ಸಿ ಯ ಸಂಪನ್ಮೂಲ ವ್ಯಕ್ತಿ ಖಲೀಲ್ ಅಝ್‌ಹರಿ, ಕ್ಯಾಂಪಸ್ ಫ್ರಂಟ್ ಮಾಜಿ ರಾಜ್ಯಾಧ್ಯಕ್ಷ ಕೆ.ಎಂ ತುಫೈಲ್,ಇಕ್ಬಾಲ್ ಬೆಳ್ಳಾರೆ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಚರ್ಚಾಕೂಟವನ್ನು ಸಮಾರೋಪಗೊಳಿಸಿದರು.

ಸಭೆಯಲ್ಲಿ ನಿರ್ಣಯಕೈಗೊಂಡ ಅಂಶಗಳು

1 ನಾಟಕದ ಹೆಸರಿನಲ್ಲಿ ದೇಶದ್ರೋಹದ ಪ್ರಕರಣದ ಅಡಿಯಲ್ಲಿ ಶಹೀನ್ ಸಂಸ್ಥೆಯ ಶಿಕ್ಷಕಿ ಮತ್ತು ಪೋಷಕಿಯ ಬಂಧನ ಮತ್ತು ಶಾಲಾ ಮಕ್ಕಳ ಮೇಲೆ ಮಾನಸಿಕ ದೌರ್ಜನ್ಯ ಖಂಡನೀಯ

2 ಎನ್.ಪಿ.ಆರ್ ವಿರುದ್ದದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗವುದು

3 ಮುಸಲ್ಮಾನರಿಗೆ ಜನಸಂಖ್ಯಾಧಾರಿತ ಮೀಸಲಾತಿ ನೀಡಬೇಕು

4 ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಮತ್ತು ಬಲಪಡಿಸಬೇಕು

5 ಕರ್ನಾಟಕ ಪೊಲಿಸ್ ರಾಜ್ಯವಾಗುತ್ತಿರುವುದನ್ನು ಕಂಡು ಜನರು ಮೌನ ಪಾಲಿಸಬಾರದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here