ನವದೆಹಲಿ: ದೇಶದ ಗಮನ ಸೇಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅವರಿಗೆ ಮತ್ತೊಮ್ಮೆ ಬಹುಪರಕವಾಗಿ ದೆಹಲಿ ಜನರು ಮತಗಳು ನೀಡುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.
ಅಮ್ ಆದ್ಮಿ ಸರ್ಕಾರದ ಜನೋಪಯೋಗಿ ಕೆಲಸಗಳೇ ಮತ್ತೆ ದೆಹಲಿ ಗದ್ದುಗೆಯ ಮೇಲೆ ಕೂರಿಸುವತ್ತ ಕೊಂಡೊಯ್ದಿದೆ ಎಂದು ಹೇಳಲಾಗಿದ್ದು, AAP: 63, BJP: 7, CONG: 00 ಹ್ಯಾಟ್ರಿಕ್ ಬಾರಿಸುವ ಮೂಲಕ ಮುನ್ನಡೆ ಸಾಧಿಸುತ್ತಿದ್ದು, ಮತ್ತೆ ಕೇಜ್ರಿವಾಲ್ ರಾಜಧಾನಿಯ ಸಿಎಂ ಆಗಲಿದ್ದಾರೆ.
ಹೀಗೆ ಬಿಜೆಪಿ ದೇಶದ ರಾಜಧಾನಿಯಲ್ಲೇ ಸೋಲು ಕಾಣೋದಕ್ಕೆ ಕೆಲ ಕಾರಣ
- ಅಭಿವೃದ್ಧಿ ಬಿಟ್ಟು ರಾಷ್ಟ್ರೀಯತೆ ಅಜೆಂಡಾದಡಿ ಬಿಜೆಪಿ ನಾಯಕರ ಪ್ರಚಾರ
- ಪೌರತ್ವ ವಿವಾದವನ್ನೇ ಪ್ರಚಾರದ ಪ್ರಮುಖ ವಿಷಯ ಮಾಡಿಕೊಂಡಿದ್ದು
- ಸಿಎಎ ವಿರೋಧಿಸುವ ದೇಶ ದ್ರೋಹಿಗಳಿಗೆ ಗುಂಡಿಕ್ಕೆ ಎಂಬ ಸಂಸದರ ಹೇಳಿಕೆ
- ಬಿಜೆಪಿಗೆ ಮುಳುವಾದ ಜಾಮಿಯಾ, ಜೆಎನ್ ಯು ನಲ್ಲಿ ನಿರಂತರ ಪ್ರತಿಭಟನೆ, ಸಂಘರ್ಷ
- ದೆಹಲಿ ಬಿಜೆಪಿ ಮುನ್ನಡೆಸುವ ಸಮರ್ಥ ನಾಯಕರೇ ಇರಲಿಲ್ಲ
- ಮೋದಿ-ಅಮಿತ್ ಶಾ ಪ್ರಚಾರ ಭಾಷಣದಲ್ಲಿ ಪಾಕಿಸ್ತಾನವೇ ಟಾರ್ಗೆಟ್, ಸೋ ನೋ ವರ್ಕ್ ಔಟ್
- ದೆಹಲಿ ಅಭಿವೃದ್ಧಿ ಬಗ್ಗೆ ಚಕಾರವನ್ನೇ ಎತ್ತದ ಮೋದಿ-ಶಾ
- ಕೇಜ್ರಿವಾಲ್ ಅಭಿವೃದ್ಧಿ ಕೆಲಸಗಳು ಪೊಳ್ಳು ಎಂದು ಟೀಕೆ
- ಶಾಹಿನ್ ಭಾಗ್ ಹೋರಾಟಕ್ಕೆ ಕೋಮು ಬಣ್ಣ ಹಚ್ಚಿದ್ದು
- ಮೋದಿ ಅವರು ಆನ್.ಆರ್.ಸಿ ಬಗ್ಗೆ ಸುಳ್ಳು ಹೇಳಿದ್ದು
- ದೆಹಲಿ ಚುನಾವಣೆ ಪಾಕಿಸ್ತಾನಕ್ಕೆ ಹೊಲಿಸಿದ್ದು.