ಕಲಬುರಗಿ: ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ಕೊಡುವುದು ಜಿಲ್ಲೆಯಲ್ಲಿರುವ ಎಲ್ಲಾ ಕಾರ್ಖಾನೆ ಖಾಸಗಿ ಉದ್ಯೋಗಿಗಳನ್ನು ಕನ್ನಡಿಗರಿಗೆ ನೀಡುವುದು ಹಾಗೂ ಇದೇ ನಾಡಿನಲ್ಲಿ ಗೆಲ್ಲಿಸಿ ಅನೇಕ ವರ್ಷಗಳಿಂದ ಅರೆಕಾಲಿಕ ಹಂಗಾಮಿ ನೌಕರರಾಗಿ ಖಾಯಂಗೊಳಿಸಿ, ಕನ್ನಡಿಗರ ರಕ್ಷಣೆ ಕಾಪಾಡಿಬೇಕೆಂದು ಶ್ರಮ ಜೀವಿಗಳ ವೇದಿಕೆಯ ಅಧ್ಯಕ್ಷರಾದ ಚಂದ್ರಶೇಖರ ಎಸ್. ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದರು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯ ನೇತೃತ್ವ ವಹಿಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪಾ ಅವರಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿ ರಾಜ್ಯದಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಅರೆಸರ್ಕಾರಿ/ಖಾಸಗಿ ಉಧ್ಯಮಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಕರ್ನಾಟಕದ್ದಲಿ ಜನಿಸಿದ ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆಗೊಳಿಸುವಂತೆ ಒತ್ತಾಯಿಸಲಾಯಿತು.
ಶ್ರಮಜೀವಿಗಳ ಪದಾಧಿಕಾರಗಳಾದ ಜಗದೀಶ ಗಿರಕಿ, ವಿಜಯಕುಮಾರ ತೆಗನೂರ, ಮಹಾಂತಪ್ಪಾ ನರೋಣಾ, ಸಾಗರ, ರಾಜು, ಸಿದ್ದಾರಾಮ ದಂಗಾಪೂರ, ರಿಯಾಜುದ್ದೀನ ಮಂಗಲಗಿ, ಸಂತೋಷ ಜಾನಿ, ವೆಂಕಟೇಶ, ಮುಂತಾದವರು ಪಾಲ್ಗೊಂಡಿದ್ದರು.