ಎಲೆಕೋಸು ಉತ್ತಮ ಬೆಳವಣಿಗೆಗೆ ಎರೆಹುಳ ಗೊಬ್ಬರ ಅತ್ಯಗತ್ಯ: ಕೃಷಿ ವಿಜ್ಞಾನ ಕೇಂದ್ರ ಸಲಹೆ

0
25

ಕಲಬುರಗಿ: ಜಿಲ್ಲೆಯಲ್ಲಿಅಲ್ಪ ಪ್ರಮಾಣದಲ್ಲಿ ಎಲೆಕೋಸು ಬೆಳೆಯನ್ನು ರೈತರು ಬೆಳೆಯುತ್ತಿದ್ದು, ಚಳಿಗಾಲದಲ್ಲಿ ಚಳಿ ಪ್ರಮಾಣಕಡಿಮೆಯಾಗಿರುವುದರಿಂದ ಹಾಗೂ ಒಣಹವೆ ಸನ್ನಿವೇಶದಿಂದಕೂಡಿದ ಪರಿಸರದಲ್ಲಿ ಬೆಳೆಯ ಸೂಕ್ತ ನಿರ್ವಹಣೆಕೈಗೊಳ್ಳುವ ಮೂಲಕ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ,  ತಂಡವು ಸಲಹೆ ನೀಡಿದೆ.

ಆಳಂದ ತಾಲೂಕಿನ ನರೋಣಾ ಗ್ರಾಮದ ಪ್ರಗತಿಪರ ರೈತರಾದ ರೇವಣಸಿದ್ದ ಆನಂದರಾವ ಪಾಟೀಲ್‌ ರವರ ಹೊಲಕ್ಕೆ ಬೇಟಿ ನೀಡಿ ಉತ್ತಮ ಇಳುವರಿಗಾಗಿ ಭೂಮಿಗೆ ಎರೆಹುಳ ಗೊಬ್ಬರ ಬಳಸಿ ಹಾಗೂ ಕೀಟಗಳ ನಿರ್ವಹಣೆಗಾಗಿ ಪರಿಸರ ಸ್ನೇಹಿ ಸಸ್ಯ ಸಂರಕ್ಷಣೆ ಕ್ರಮಗಳನ್ನು ಪಾಲಿಸಲು ಸೂಚಿಸಿದರು.

Contact Your\'s Advertisement; 9902492681

ರೈತರು ಸಸಿ ಮಡಿ ಹಂತ ಹಾಗೂ ಮುಖ್ಯಕ್ಷೇತ್ರದಲ್ಲಿ ನಾಟಿ ಮಾಡುವ ಸಮಯದಲ್ಲಿ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಹಾಗೂ ವಾರಕ್ಕೊಮ್ಮೆ ನೀರು ಹರಿಸಿದಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಬಹುದು. ತಂಡದಲ್ಲಿ ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ವಿಜ್ಞಾನಿಗಳಾದ ಡಾ. ಯುಸುಫ್‌ ಅಲಿ, ಡಾ. ಜಹೀರ್‌ ಅಹೆಮದ್, ಡಾ. ಶ್ರೀನಿವಾಸ ಬಿ.ವಿ ಹಾಗೂ ನಾಗಿಂದ್ರ ಬಡದಾಳಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here