ಶಹಾಪುರ: ಗ್ರಾಮೀಣ ಭಾಗದಲ್ಲಿ ಈ ತರಹದ ಶೈಕ್ಷಣಿಕ ಮೇಳಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಬಿಆರ್‌ಪಿ ಖಾದರ್ ಪಟೇಲ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ತಾಲೂಕಿನ ಸೂಗುರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾಷೆ ಮತ್ತು ಗಣಿತ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು .
ಎಪಿಎಫನ ತಾಲ್ಲೂಕು ಸಂಯೋಜಕ ಸುರೇಶಗೌಡ ಮಾತನಾಡಿ, ಇಂತಹ ಶೈಕ್ಷಣಿಕ ಮೇಳಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಭಾಷೆ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದ ಅಭಿವ್ಯಕ್ತಿ ಕೌಶಲ ಹೆಚ್ಚಾಗುವುದೆಂದು ಭಿಪ್ರಾಯಪಟ್ಟರು.
ಸಿಆರಪಿ ಅಶೋಕ್ ಬಾಬರೆ ಮುಖ್ಯಗುರು ಸೂಗಪ್ಪ ಶಿಕ್ಷಕರಾದ ರೇಣುಕಾ ರಮ್ಯಾ ರೇಣುಕಾ ಎಸ್ಡಿಎಂಸಿ ಅಧ್ಯಕ್ಷರಾದ ಸಿದ್ದರಾಮರೆಡ್ಡಿ ಶಿವು ದೇಸಾಯಿ ಮಲ್ಲಿಕಾರ್ಜುನ ಮಲ್ಲಣ್ಣ ಗೌಡ ತಾಯಮ್ಮ ಬಾಳಪ್ಪ ಬಸವರಾಜ ಕೂಡ್ಲಿಗಿ ಎಪಿಎಫ್ನ ಸರೋಜಾ ಅಜೀಮ್ ಫರೀದಿ ವಿನೋದ್ ಕುಮಾರ್ ಪರಮಣ್ಣ ಅನ್ವರ್ ಜಮಾದಾರ್ ಭಾಗವಹಿಸಿದ್ದರು ರುಕ್ಮಾಪುರ ಕ್ಲಸ್ಟರ್ನ ಶಿಕ್ಷ ಕರು ಮತ್ತು ಮಕ್ಕಳು ಸೂಗೂರು ಗ್ರಾಮದ ಪಾಲಕ ಪೋಷಕರು ಮೇಳದಲ್ಲಿ ಭಾಗವಹಿಸಿದ್ದರು