ಸುರಪುರ: ಕನ್ನಡದ ನುಡಿ ಗಡಿ ಮತ್ತು ಭಾಷೆಯ ಉಳಿವಿಗಾಗಿ ನಿರಂತರವಾಗಿ ದುಡಿಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇದೇ ತಿಂಗಳು ೧೫ನೇ ತಾರೀಖಿನಂದು ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನ್ನಡ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಎಲ್ಲಾ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಮಾತನಾಡಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಹಮ್ಮಿಕೊಂಡಿದ್ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ತಾಲೂಕಿನ ಎಲ್ಲಾ ಶಾಖೆಗಳ ಕರವೇ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ ಹಾಗು ವೆಂಕಟೇಶ ಪ್ಯಾಪ್ಲಿಯವರ ಶ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ ಮಾತನಾಡಿ,೧೫ನೇ ತಾರೀಖು ಬೆಳಿಗ್ಗೆ ೧೧ ಗಂಟೆಗೆ ಡಾ: ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದಿಂದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದ ವರೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದೆ,ಮೆರವಣಿಗೆಗೆ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಚಾಲನೆ ನೀಡಲಿದ್ದು,ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ನಂತರ ಮದ್ಹ್ಯಾನ ೩ ಗಂಟೆಯಿಂದ ಕಾರ್ಯಕ್ರಮದ ವೇದಿಕೆ ಬಳಿಯಲ್ಲಿ ದೇವಾಪುರದ ಯುವಕರ ತಂಡದಿಂದ ಬಿಲ್ವಿದ್ಯೆ ಪ್ರದರ್ಶನ ನಡೆಯಲಿದೆ.ಸಂಜೆ ೬ ಗಂಟೆಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೇದಿಕೆಯಲ್ಲಿ ಜಾಗೃತಿ ಸಮಾವೇಶ ನಡೆಯಲಿದ್ದು,ಶಹಾಪುರದ ಕಾಳಹಸ್ತೇಂದ್ರ ಮಹಾಸ್ವಾಮಿಜಿ,ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ,ವೀರಗೋಟಸ ಅಡಿವಿಲಿಂಗ ಮಹಾರಾಜ ಹಾಗು ಲಕ್ಷ್ಮೀಪುರದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯವಹಿಸಲಿದ್ದು,ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ವಹಿಸಲಿದ್ದು ಕರವೇ ರಾಜ್ಯ ಸಂಚಾಲಕರಾದ ಬಸವರಾಜ ಪಡಕೋಟೆ,ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ಜಿ.ಪಂ ಅಧ್ಯಕ್ಷರಾದ ರಾಜಶೇಖರಗೌಡ ವಜ್ಜಲ,ಬಲಭೀಮನಾಯಕ ಬೈರಿಮರಡಿ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ರಂಗದಲ್ಲಿ ಸಾಧನೆಗೈದ ೨೧ಜನ ಸಾಧಕರಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಅಲ್ಲದೆ ಯಾರ್ ಮಗ ಸಿನೆಮಾದ ನಟ ರಘು ಪಡಕೋಟೆ,ಡ್ಯಾನ್ಸ್ ಡಿ೯ ಗ್ರುಪ್,ಸರಿಗಮಪ ಕಾರ್ಯಕ್ರಮದ ಮಹಿಬೂಬ ಸಾಬ್,ಮೋನಮ್ಮ ಸೋಮನಮರಡಿ,ಪೃಥ್ವಿ ಭಟ್,ಜ್ಯೂ ಉಪೇಂದ್ರ ಹಾಗು ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೊಪಾಲ ಇಂಜಿಗೇರಿ ಇವರುಗಳಿಗೆ ವಿಶೇಷ ಸನ್ಮಾನ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಆದ್ದರಿಂದ ಎಲ್ಲಾ ಕನ್ನಡಭಿಮಾನಿಗಳು ಹಾಗು ರಕ್ಷಣಾ ವೇದಿಕೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷ ವೆಂಕಟೇಶ ಪ್ಯಾಪ್ಲಿ,ಜಿಲ್ಲಾ ಸಂ,ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ,ತಾಲೂಕು ಉಪಾಧ್ಯಕ್ಷ ಹಣಮಗೌಡ ಶಖಾಪುರ,ವಕ್ತಾರ ಕೃಷ್ಣಾ ಮಂಗಿಹಾಳ,ಆನಂದ ಮಾಚಗುಂಡಾಳ,ಶ್ರವಣಕುಮಾರ ಡೊಣ್ಣಿಗೇರಾ,ಅನಿಲ ಬಿರಾದಾರ,ಬಾಷಾ ನದಾಫ,ಶ್ರೀನಿವಾಸ ಲಕ್ಷ್ಮೀಪುರ,ಅಯ್ಯಪ್ಪ ವಗ್ಗಾಲಿ,ಪ್ರಭು ಮಂಗಿಹಾಳ,ಭೀಮಣ್ಣ ಬೇವಿನಾಳ ಸೇರಿದಂತೆ ಅನೇಕರಿದ್ದರು.