ಸುರಪುರ: ಮುಸ್ಲಿಂ ಸಮಾಜ ಸುರಪುರ ರಂಗಂಪೇಟೆ ಹಾಗು ತಿಮ್ಮಾಪುರ ವತಿಯಿಂದ ಏಕ್ ಶ್ಯಾಮ್ ಶಹೀದೊಕೆ ನಾಮ್ ಎಂಬ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಕಳೆದ ಒಂದು ವರ್ಷದ ಹಿಂದೆ ನಡೆದ ಫುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಹಾಗು ಸಿಎಎ,ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ನಡೆದ ಹೋರಾಟದಲ್ಲಿ ಹತರಾದ ನಾಗರಿಕರಿಗೆ ಶ್ರದ್ಧಾಂಜಲಿಯಾಗಿ ಮಗರದ ರಂಗಂಪೇಟೆಯ ಜಾಮೀಯಾ ಮಸೀದಿಯಿಂದ ಸುರಪುರದ ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತದ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಮೇಣದ ಬತ್ತಿ ಹಿಡಿದು ಶಾಂತಿಯುತ ಮೆರವಣಿಗೆ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಫುಲ್ವಾಮಾ ದಾಳಿಯನ್ನು ಖಂಡಿಸಿದರು.ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡು ಹುತಾತ್ಮ ಯೋಧರಿಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಅಹ್ಮದ್ ಪಠಾಣ,ಮುಫ್ತಿ ಎಕ್ಬಾಲ್ ಅಹ್ಮದ್ ಸಾಬ್ ಒಂಟಿ ಫುಲ್ವಾಮಾ ದಾಳಿಯನ್ನು ಖಂಡಿಸಿ ಮಾತನಾಡಿದರು.
ಮೆರವಣಿಗೆಯಲ್ಲಿ ಅಬ್ದುಲ್ ಗಫೂರ ನಗನೂರಿ,ಮುನವರಸಾಬ್ ಅರಕೇರಿ,ಮಹಿಬೂಬಸಾಬ್ ಒಂಟಿ,ಅಬ್ದುಲ್ ಮಜೀದ್ಸಾಬ್ ಖುರೇಶಿ,ಎ.ಆರ್.ಪಾಶಾ,ಖಾಲೀದ್ ಅಹ್ಮದ ತಾಳಿಕೋಟೆ,ನಿಜ್ಜು ಉಸ್ತಾದ,ನಾಸೀರ್ ಹುಸೇನ್ ಕುಂಡಾಲೆ,ಮಹ್ಮದ್ ಕಮರುದ್ದೀನ್,ಲಿಯಾಖತ್ ಹುಸೇನ್,ಜಹೀರ್ ಬಗ್ಗು,ಬಾಬಾ ಸಾಬ್ ಶೋರಾಪುರ,ದಾವೂದ್ ಪಠಾಣ,ಶೇಖ್ ಇತ್ತಿಹಾಕ್ ಹುಸೇನ್,ಸಯ್ಯದ್ ಇದರೀಸ್ ಜಹಾರೀರದಾರ,ಅಬೀದ್ ಹುಸೇನ್ ಪಗಡಿ ಸೇರಿದಂತೆ ಅನೇಕರಿದ್ದರು.