ಆಳಂದ: ಇಂದಿನ ಪ್ರಸ್ತುತ ಅವಶ್ಯಕತೆಗಳನ್ನು ಪೂರೈಸುವ ಹಾಗೂ ಮುಂದಿನ ಭವಿಷ್ಯತ್ತಿನ ಬೇಡಿಕೆಗಳನ್ನು ಈಡೇರಿಸುವುದೇ ನಮ್ಮ ಶಿಕ್ಷಣ ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ಜಿ.ಪಂ ಸದಸ್ಯರೂ, ಎಸ್‌ಆರ್‌ಜಿ ಫೌಂಡೇಶನ್‌ನ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ ಹೇಳಿದರು.
ಶನಿವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಪೆಟ್ರೋಲ್ ಪಂಪ್ ಹಿಂದುಗಡೆ ಇರುವ ಎಸ್‌ಆರ್‌ಜಿ ಫೌಂಡೇಶನ್‌ನ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ೧೨ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ತಾಲೂಕಾ ಪ್ರದೇಶದಲ್ಲಿ ಆಂಗ್ಲ್ ಮಾಧ್ಯಮ ಶಾಲೆಯ ಅವಶ್ಯಕತೆಯನ್ನು ಮನಗಂಡು ಆಂಗ್ಲ್ ಮಾಧ್ಯಮ ಶಾಲೆಯನ್ನು ತಮ್ಮ ಸಂಸ್ಥೆಯಿಂದ ಆರಂಭಿಸಿದ್ದೇವು ಈಗ ಶಾಲೆ ಗುಣಾತ್ಮಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಕಾರ್ಯ ಮಾಡುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷರೂ, ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಿದ್ದುದು ಗಮನ ಸೆಳೆಯಿತು.
ವ್ಯವಹಾರಕ್ಕಾಗಿ ನಾವು ಆಂಗ್ಲ್ ಭಾಷೆಯನ್ನು ಕಲಿಯಲೇ ಬೇಕಾಗಿದೆ ಹಾಗಂತ ಮಾತೃಭಾಷೆಯನ್ನು ಮರೆಯಬೇಕಿಲ್ಲ. ಮಾತೃಭಾಷೆಯ ಮೂಲಕ ನಾವು ಬೇರೆ ಯಾವ ಭಾಷೆಯನ್ನಾದರೂ ಕಲಿಯಬಹುದು ಅದಕ್ಕಾಗಿ ಮನೆಯಲ್ಲಿ ಸ್ಪಷ್ಟವಾಗಿ ಮಾತೃಭಾಷೆಯಲ್ಲಿ ಮಾತನಾಡಲು ಕಲಿತರೇ, ಶಾಲೆಯಲ್ಲಿ ಆಂಗ್ಲ್ ಭಾಷೆ ಸರಳವಾಗಿ ಕಲಿತು ಸಮಾಜದಲ್ಲಿ ಅದನ್ನು ಉಪಯೋಗಿಸಬಹುದು ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಮಾತನಾಡಿ, ಶಾಲೆಯ ಆವರಣವನ್ನು ವಿದ್ಯಾರ್ಥಿ ಸ್ನೇಹಿ ಆವರಣವನ್ನಾಗಿ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ ಅದರ ಫಲವಾಗಿಯೇ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶಾಲೆಯ ಫಲಿತಾಂಶ ಶೇ ೧೦೦% ಬಂದಿದೆ ಎಂದು ತಿಳಿಸಿದರು.
ನಟ ಭರತ ಸಾಗರ ಮಾತನಾಡಿದರು. ಪ್ರಾಚಾರ್ಯರಾದ ಅಶೋಕ ರೆಡ್ಡಿ, ಕಲ್ಯಾಣಿ ಸಾವಳಗಿ, ಡಾ. ಅಪ್ಪಾಸಾಬ ಬಿರಾದಾರ ವೇದಿಕೆಯ ಮೇಲಿದ್ದರು. ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ಪ್ರಸ್ತುತ ಪಡಿಸಿದರು. ಶಿಕ್ಷಕಿ ಪೂಜಾ ನಿರೂಪಿಸಿದರೇ, ವಿನುತಾ ವಂದಿಸಿದರು. ಶಾಲೆಯ ಪ್ರಾಚಾರ್ಯೆ ಜೆಎನ್‌ಎಸ್ ಕಿರಣ್ಮಯಿ ವಾರ್ಷಿಕ ವರದಿ ಮಂಡಿಸಿ ಅಧ್ಯಕ್ಷತೆ ವಹಿಸಿದ್ದರು.