ಬೆಂಗಳೂರು: NRC CAA ವಿರುದ್ಧ ನಿನ್ನ ದಾಖಲೆ ಯಾವಾಗ ಕೊಡುತ್ತೀ..? ಎಂದು ಕವನ ವಾಚಿಸಿದ್ದ ಸಿರಾಜ್ ಬೀಸರಳ್ಳಿ, ಪತ್ರಕರ್ತ ರಾಜಾಭಕ್ಷಿ ಬಂಧನ ಖಂಡಿಸಿ ಹಾಗೂ ಪ್ರಕರಣವನ್ನು ಹಿಂಪಡೆಯಲು ಒತ್ತಾಯಿಸಿ ಇಂದು ಬೆಂಗಳೂರಿನ ಟೌನ್ ಹಾಲ್ ಎದುರು SFI, DYFI, JMS ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆಸಿ ಕವನ ವಾಚನ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಸಾಹಿತಿಗಳಾದ ಡಾ.ವಿಜಯಮ್ಮ, ಬೋಳುವಾರು ಮಹಮ್ಮದ್ ಕುಞಿ, ಯೋಗೇಶ ಮಾಸ್ಟರ್, ನಗರಗೆರೆ ರಮೇಶ್, ಡಾ.ರಜಾಕ್ ಉಸ್ತಾದ್, ಅಣ್ಣಪ್ಪ ಮೇಟಿಗೌಡ್ರು, ಸುರೇಂದ್ರ ರಾವ್, ಜಿ.ಎನ್.ನಾಗರಾಜ್, ಅಂಬರೀಶ್ ಪಾಂಡವಪುರ, ಕೆ.ಮಹಾಂತೇಶ, ಕ್ರಾಂತಿ ಸಿಂಹ ಮಂಡ್ಯ, ಕೆಸರಿ ಅರಿವು, ಜಗದೀಶ್, ಮಮತಾ ಸಾಗರ, ಎಸ್.ಜಿ ಸಿದ್ಧರಾಮಯ್ಯ, ಗಾಯತ್ರಿ, ರಮಾಕಾಂತ ಪುರಾಣಿಕ್, ವೆಂಕಟೇಶ ಮೂರ್ತಿ ಮತ್ತು ಶ್ರೀಪತಿ ಭಟ್, ಪ್ರತಿರೋಧವಾಗಿ ಕವನಗಳನ್ನು ವಾಚಿಸಿದರು.
ಈ ಹೋರಾಟದಲ್ಲಿ AIDWA ರಾಜ್ಯ ಉಪಾಧ್ಯಕ್ಷರು ಕೆ.ಎಸ್. ವಿಮಲಾ, SFI ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ,. ಜಿ.ಎನ್ ನಾಗರಾಜ, ಸಮುದಾಯದ ಸುರೇಂದ್ರ ರಾವ್, AILU ರಾಜ್ಯ ಉಪಾಧ್ಯಕ್ಷರು ಶಿವಶಂಕರಪ್ಪ, ಹೈಕೋರ್ಟ್ ವಕೀಲರು ಅನಂತ್ ನಾಯಕ್, ಕನ್ನಡ ರಣಧೀರ ಪಡೆಯ ಬಿ.ಹರೀಶ್ ಕುಮಾರ್, ಕಾವ್ಯ ಅಚ್ಯುತ್, DYFI ರಾಜ್ಯ ಖಜಾಂಚಿ ನಿಧಿನ್, ಕೆವಿಎಸ್ ಸಂಚಾಲಕರು ಸರೋವರ ಬೆಂಕಿಕೆರೆ, ಎಸ್ಎಫ್ಐ
ರಾಜ್ಯ ಉಪಾಧ್ಯಕ್ಷರಾದ ಗಾಯತ್ರಿ, ಶಿವಕುಮಾರ್ ಮ್ಯಾಗಳಮನಿ, ದಿಲೀಪ್ ಶೆಟ್ಟಿ , ಸಹ ಕಾರ್ಯದರ್ಶಿಗಳಾದ ಭೀಮನಗೌಡ ಮತ್ತು ರಮೇಶ್ ವೀರಾಪುರ, ಸಾಗರ, ವಸಂತ ಕಲಾಲ್, JMS ಜಿಲ್ಲಾ ಕಾರ್ಯದರ್ಶಿ ಲಲಿತಾ ಶೆಣೈ, ಸೆಲ್ವಿ, ರಾಜೇಶ್ವರಿ, ಹಾಗೂ ನೂರಾರು ಜನರು ಭಾಗವಹಿಸಿದ್ದರು.