ಸುರಪುರ: ನಗರದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸುರಪುರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ೧೫ ನಿರ್ದೇಶಕ ಸ್ಥಾನಗಳಲ್ಲಿ ೧೩ ಸ್ಥಾನ ಅವಿರೋಧ ಹಾಗು ೨ ಸ್ಥಾನಗಳು ಚುನಾವಣೆಯ ಮೂಲಕ ನೇಮಕಗೊಂಡವು.
ಅವಿರೋಧವಾಗಿ ಆಯ್ಕೆಗೊಂಡ ೧೩ ಸ್ಥಾನಗಳಿಗೆ ರಾಜಾ ರಾಮಪ್ಪ ನಾಯಕ ಎಲ್.ನಾಯಕ (ಸಾಮಾನ್ಯ),ಮಹೇಶ ಸೂಗಪ್ಪ ಜೇವರ್ಗಿ (ಸಾಮಾನ್ಯ),ಭೀಮಾಶಂಕರ ಸಿ.ಬಿಲ್ಲವ್ (ಸಾಮಾನ್ಯ),ರಾಜಾ ರಂಗಪ್ಪ ನಾಯಕ ಆರ್.ಎಲ್.ನಾಯಕ (ಸಾಮಾನ್ಯ), ರಮೇಶಚಂದ್ರ ಡಿ.ಜೈನ್ (ಸಾಮಾನ್ಯ), ರಾಕೇಶ ಟಿ.ಹಂಚಾಟೆ (ಸಾಮಾನ್ಯ),ರಾಜಾ ಮುಕುಂದ ನಾಯಕ ಆರ್.ವಿ.ನಾಯಕ (ಸಾಮಾನ್ಯ), ಪಾರಪ್ಪ ಲಕ್ಷ್ಮಣ (ಸಾಮಾನ್ಯ), ಚವ್ವಾ ಮಹೇಶ್ವರ ರಡ್ಡಿ (ಸಾಮಾನ್ಯ). ಪ್ರಕಾಶ ಆರ್.ಸಜ್ಜನ್ (ಹಿಂ.ವ-ಅ).ಖಾಜಾ ಖಲೀಲಹ್ಮದ್ ಸಾಬ್ (ಹಿಂ.ವ-ಬ),ವೆಂಕಟೇಶ ಎನ್.ಹೊಸಮನಿ (ಪ.ಜಾ),ರಂಗಪ್ಪ ನಾಯಕ ಪ್ಯಾಪ್ಲಿ (ಪ.ಪಂ) ಹಾಗೂ ಚುನಾಯಿತರಾಗಿ ಛಾಯಾ ಮನೋಹರ ಕುಂಟೋಜಿ (ಮಹಿಳಾ),ಪಾರ್ವತಿ ಮಲ್ಲಿಕಾರ್ಜುನ (ಮಹಿಳಾ) ಕ್ರಮ ಬದ್ಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.