ಸುರಪುರ: ತಾಲೂಕಿನಶಾಂತಪುರ ಗ್ರಾಮದ ಸಮೀಪ ಬೀದರ್ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳ್ಳಾರಿಯಿಂದ ಕಲಬುರ್ಗಿಗೆ ಹೋಗುತ್ತಿದ್ದ ಬಸ್ಸಿಗೆ ಎದುರುಗಡೆಯಿಂದ ಹೋಗುತ್ತಿದ್ದ ಬೈಕ್ ಸವಾರ ಬಸ್ಸಿಗೆ ಗುದ್ದಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಸಂಜೆ 7:30 ಸುಮಾರಿಗೆ ನಡೆದಿದೆ.
ಬಸಪ್ಪ ತಂದೆ ಸೋಪಣ್ಣ ಪೂಜಾರಿ (38 ವರ್ಷ) ತಾಲೂಕಿನ ವಾಗಣಗೇರಿ ಗ್ರಾಮದಿಂದ ತನ್ನ ಪತ್ನಿಯ ಗ್ರಾಮವಾದ ಲಿಂಗಸೂರು ತಾಲೂಕಿನ ಗುಡಗುಂಟಿ ಗ್ರಾಮಕ್ಕೆ ಹೋಗುವ ವೇಳೆ ಶಾಂತಪುರ ಸಮೀಪದ ಹೆದ್ದಾರಿ ರಸ್ತೆಯ ತಿರುವಿನಲ್ಲಿ ಸ್ಪೀಡಾಗಿ ಕಾರಣದಿಂದ ಎದುರುಗಡೆ ಬರುತ್ತಿದ್ದ ಬಸ್ಸಿಗೆ ಗುದ್ದಿದ ಪರಿಣಾಮವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಸ್ಥಳಕ್ಕೆ ಸುರಪುರ ಠಾಣೆಯ ಪಿಐ ಆನಂದರಾವ್ ಮತ್ತವರ ಸಿಬ್ಬಂದಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಶವವನ್ನು ಸುರುಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಮೃತ ವ್ಯಕ್ತಿಗೆ ಪತ್ನಿ ಹಾಗೂ ಮೂರು ಜನ ಗಂಡುಮಕ್ಕಳು ಒಬ್ಬಳು ಹೆಣ್ಣು ಮಗಳು ಇರುವ ಬಗ್ಗೆ ತಿಳಿದುಬಂದಿದೆ. ಸುರಪುರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.