ಶಹಾಪುರ: ನಿನ್ನೆ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ಹಿನ್ನೆಲೆಯಲ್ಲಿ ಅವಳ ವಿರುದ್ಧ ಶಹಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭಾರತದಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದು ಭಾರತದ ಅನ್ನವನ್ನೇ ತಿಂದು ದೇಶಕ್ಕೇ ದ್ರೋಹವನ್ನು ಬಗೆಯುವ ಕೆಲಸ ಮಾಡುತ್ತಿರುವ ಅಮೂಲ್ಯ ಳನ್ನು ಗಡಿಪಾರು ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಒಕ್ಕೂರಿಲಿನಿಂದ ಒತ್ತಾಯಿಸಲಾಯಿತು.
ಶಾಂತಿ ಕದಡುವ ಕೆಲಸ ಮಾಡುತ್ತಿರುವ ಅಮೂಲ್ಯ ಹುಚ್ಚನಂತೆ ವರ್ತಿಸುತ್ತಿರುವುದು ತೀವ್ರ ಖಂಡನೀಯ ಒಂದು ಪ್ರಗತಿಪರ ಚಿಂತಕರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಖ್ಯಾತ ವೈದ್ಯರಾದ ಡಾ:ಚಂದ್ರಶೇಖರ ಸುಬೇದಾರ, ಅಡಿವಪ್ಪ ಜಾಕಾ, ವೆಂಕಟೇಶ್ ಬೋನೆರ್, ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.