ಕಲಬುರಗಿ: ಎಲ್ಲೆಡೆ ಶಿವನಾಮ ಸ್ಮರಣೆ

0
82

ಕಲಬುರಗಿ: ಮಹಾ ಶಿವರಾತ್ರಿ ನಿಮಿತ್ತ ನಗರದ ಪ್ರಮುಖ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಹೊರ ವಲಯದ ರಾಮತೀರ್ಥದ ಶಿವಮಂದಿರದಲ್ಲಿ ವಿಶೇಷವಾಗಿ ಅಲಂಕರಿಸಿದ ಶಿವಲಿಂಗ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ದವರು ಗೀತಾ ನಗರದಲ್ಲಿ ಪ್ರತಿಷ್ಠಾಪಿಸಿದ ರುದ್ರಾಕ್ಷಿ ಶಿವಲಿಂಗಗಳು ಅತ್ಯಂತ ಆಕರ್ಷಕ ಗೊಂಡವು.

Contact Your\'s Advertisement; 9902492681

ಅದರಂತೆ ಗೋದುತಾಯಿ ನಗರ, ವೆಂಕಟೇಶ್ವರ ನಗರ, ಮಾರ್ಕೆಟ್ ಪ್ರದೇಶ, ಓಕಳಿ ಕ್ಯಾಂಪ್, ಜಯನಗರ ಮುಂತಾದ ಕಡೆಗಳಲ್ಲಿ ಶಿವನ ಮೂರ್ತಿಗೆ ವಿಶೇಷ ಶೃಂಗಾರ ಮಾಡಿದ್ದರು.

ನಗರದ ವಿವಿಧ ಬಡಾವಣೆಯ ಜನರು ನಸುಕಿನಿಂದಲೇ ಈ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿ ನಿಮಿತ್ತ ನಗರದ ಎಲ್ಲ ದೇವಸ್ಥಾನಗಳಲ್ಲಿ ಶಿವನನ್ನು ಸ್ಥುತಿಸುವ ಹಾಡುಗಳು ಕೇಳಿ ಬರುತ್ತಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.

ಪ್ರಮುಖ ಮಾರುಕಟ್ಟೆಗಳಲ್ಲಿ ಹೂ, ಹಣ್ಣು ಕಾಯಿ, ಕರ್ಪೂರದ ಮಾರಾಟ ಬರ್ಜರಿಯಾಗಿ ನಡೆದಿತ್ತು. ವ್ಯಾಪಾರ, ವಹಿವಾಟು ಜೋರಾಗಿತ್ತು. ಶಿವರಾತ್ರಿ ನಿಮಿತ್ತ ರಸ್ತೆ ಸಂಚಾರ ದಟ್ಟಣೆ ಕೂಡ ಕಡಿಮೆಯಾಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರವೇ ಆಗಿರಲಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here