ಸಾಕ್ಷರತೆ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ: ಅರ್ಚನಾ ಮಾಡ್ಯಾಳಕರ್

0
77

ಶಹಾಬಾದ: ನಗರದ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದಿ ಮಕ್ಕಳಿಗೂ ಅಕ್ಷರ ಜ್ಞಾನ ನೀಡುವ ಮೂಲಕ ಪೂರ್ಣ ಸಾಕ್ಷರತೆ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಲಬುರಗಿ ಜಿಲ್ಲಾ ಸಹಾಯಕ ಲೋಕಶಿಕ್ಷಣ ಸಮಿತಿಯ ಅಧಿಕಾರಿ ಅರ್ಚನಾ ಮಾಡ್ಯಾಳಕರ್ ಹೇಳಿದರು.

ಅವರು ನಗರದ ಜಿಪಿಎಸ್ ಶಾಲೆಯಲ್ಲಿ ಜಿಲ್ಲಾ ನಗರ ಸಾಕ್ಷರತಾ ಸಮಿತಿ ಕಲಬುರಗಿ, ಚಿತ್ತಾಪೂರ ಲೋಕ ಶಿಕ್ಷಣ ಸಮಿತಿ ಹಾಗೂ ಶ್ರೀ ಸಿದ್ಧಬಸವೇಶ್ವರ ರಿಕ್ರಿಯೇಶನ್ ಮತ್ತು ಸ್ಪೋರ್ಟ್ಸ ಅಸೋಶಿಯೇಷನ್ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಗರ ಹಾಗೂ ಕೊಳಚೆ ಪ್ರದೇಶದ  ಮೂಲ ಸಾಕ್ಷರತೆ ಕಾರ್ಯಕ್ರಮದ ಭೋಧಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಅಕ್ಷರ ಜ್ಞಾನ ಎಲ್ಲಾ ಜ್ಞಾನಕ್ಕಿಂತ ಶ್ರೇಷ್ಠ.ಅನಕ್ಷರಸ್ಥರಿಗೆ ಅಕ್ಷರಸ್ಥರನ್ನಾಗಿ ಮಾಡಿದರೆ ಅದು ಅಂಧರಿಗೆ ದೃಷ್ಠಿ ನೀಡಿದಂತೆ ಸಮಾನ. ಆ ದೃಷ್ಠಿಯಿಂದ ಎಲ್ಲಾ ವಯಸ್ಕರು ತಾವು ಅಕ್ಷರ ಕಲಿಯುವುದಲ್ಲದೇ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಕ್ಷರ ಕಲಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಾವು ಕೈ ಜೋಡಿಸಿ ಎಂದು ಹೇಳಿದರು.

ಬಹುಮುಖಿ ಸಾಹಿತಿ ನಾಗಪ್ಪ.ಎಸ್.ಬೆಳಮಗಿ ಮಾತನಾಡಿ, ನಗರ ಹಾಗೂ ಕೊಳಚೆ ಪ್ರದೇಶದಲ್ಲಿನ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಸ್ಥರನ್ನಾಗಿ ಮಾಡುವುದೆಂದರೆ,ಕತ್ತಲಲ್ಲಿ ನೊಂದ ಜನರ ಬಾಳಿಗೆ ಬೆಳಕು ಕೊಟ್ಟ ಹಾಗೆ.ಆದ್ದರಿಂದ ಅನಕ್ಷರಸ್ಥ ವಯಸ್ಕರು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು.ಅಲ್ಲದೇ ಅಕ್ಷರಸ್ಥರು ಇದಕ್ಕೆ ಕೈಜೋಡಿವಲ್ಲಿ ಮುಂದಾಗಬೇಕೆಂದು ತಿಳಿಸಿದರು.

ಕಸಾಪ ಕಲಬುರಗಿ ಗ್ರಾಮೀಣ ವಲಯದ ಅಧ್ಯಕ್ಷ ಶರಣಗೌಡ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಜಿಪಿಎಸ್ ಶಾಲೆಯ ಮುಖ್ಯಗುರು ಶಿವಪುತ್ರಪ್ಪ ಕೋಣಿನ್,ತಾಲೂಕಾ ಸಂಯೋಜಕ ಪ್ರಕಾಶ ಕಟ್ಟಮನಿ, ಮಹಿಳಾ ಸಾಕ್ಷರತಾ ಸಮಿತಿ ನಗರ ಅಧ್ಯಕ್ಷೆ ಶಕುಂತಲಾ ಪಾಟೀಲ, ಸಿದ್ಧಾರೂಡ ಮಠದ ಅಧ್ಯಕ್ಷ ಭೀಮರಾಯ ಕನಕನಹಳ್ಳಿ, ಸವಿತಾ ಸಮಾಜದ ಅಧ್ಯಕ್ಷ ತಾಲೂಕಾಧ್ಯಕ್ಷ ದಶರಥ ಕೋಟನೂರ್,ವಿಶ್ವನಾಥ ಚಿತ್ತಾಪೂರಕರ್, ಸಂತೋಷ ಹುಲಿ, ಬಸವರಾಜ ಹೂಗಾರ, ಭಂಡಯ್ಯಸ್ವಾಮಿ, ಲೋಕ ಶಿಕ್ಷಣ ಸಮಿತಿಯ ಜಿಲ್ಲಾ ಸಂಯೋಜಕರು ಪ್ರೀಯಾ ವಗ್ಗನ್ ಇತರರು ಇದ್ದರು.

ರವೀಂದ್ರ ಬೆಳಮಗಿ ನಿರೂಪಿಸಿದರು, ನಾಗಯ್ಯಸ್ವಾಮಿ ಸ್ವಾಗತಿಸಿದರು, ಲಕ್ಷ್ಮಿಕಾಂತ ಬಳಿಚಕ್ರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here