ವಾಡಿ: ಅಸಾಹಾಯಕರು ಮತ್ತು ನಿರ್ಗತಿಕರಿಗೆ ದಾನ ಧರ್ಮ ಮಾಡುವ ಮೂಲಕ ಪವಿತ್ರಾತ್ಮದಿಂದ ದೇವರನ್ನು ಕಾಣಬೇಕು ಎಂದು ಹಳಕರ್ಟಿಯ ಸಿದ್ದೇಶ್ವರ ಧ್ಯಾನಧಾಮದ ಶ್ರೀರಾಜಶೇಖರ ಸ್ವಾಮೀಜಿ ನುಡಿದರು.
ಶ್ರೀಸಿದ್ಧೇಶ್ವರ ಧ್ಯಾನದಾಮದ ಪಂಚ ವಾರ್ಷಿಕೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಮಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದೇಹ ಮತ್ತು ಮನಸ್ಸಿನ ಶುದ್ಧಿಗಾಗಿ ಶರಣರ ಸಂತರ ಜೀವನ ಚರೀತ್ರೆಯ ಪ್ರವಚನ ಆಲಿಸುವುದು ಅಗತ್ಯವಾಗಿದೆ. ಜಗತ್ತಿನ ಜ್ಞಾನದ ಹರಿವು ಪ್ರಾಪ್ತಿಗಾಗಿ ಗುರುವಿನ ಮಾರ್ಗ ಅನುಸರಿಸಬೇಕು. ಮಠ ಮಾನ್ಯಗಳ ಅನ್ನ ದಾಸೋಹ ಅಕ್ಷರ ದಾಸೋಹದಿಂದಾಗಿ ಸಮಾಜದಲ್ಲಿ ಮೌಲ್ಯಗಳು ಉಳಿದುಕೊಂಡಿವೆ ಎಂದರು.
ಅಳ್ಳೊಳ್ಳಿ ಗದ್ದುಗೆ ಮಠದ ಶ್ರೀಅಯ್ಯಪ್ಪಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು. ಶರಣಕುಮಾರ ಹಿತ್ತಲಶಿರೂರ ಪ್ರವಚನ ನಡೆಸಿಕೊಟ್ಟರು. ಮುಖಂಡರಾದ ಶರಣಪ್ಪಸಾಹು ಜೀವಣಗಿ, ಇಬ್ರಾಹಿಮ ಪಟೇಲ, ಇಮ್ತೀಯಾಜ್ ಪಟೇಲ, ನಾಗಣ್ಣಗೌಡ ಪೊಲೀಸ್ ಪಾಟೀಲ, ನಾಗಣ್ಣಸಾಹು ಚಂದನಕೇರಿ, ಶ್ರೀಶೈಲ ಬಡಿಗೇರ, ಶರಣಗೌಡ ಮೇಲಿನಮನಿ, ಸಾಬಣ್ಣ ಪೂಜಾರಿ, ಶಿವರಾಯ ತಳವಾರ, ಸೋಮು ಹಡಪದ, ಕರಣಪ್ಪ ಇಸಬಾ, ಬಸಣ್ಣ ಜೈನಾಪುರ, ಗೋವಿಂದ ಜಾಧವ, ಶಂಕರ ಜಾಧವ ಪಾಲ್ಗೊಂಡಿದ್ದರು. ಗವಾಯಿ ಮಲ್ಲಿಕಾರ್ಜುನ ಮಣ್ಣೂರ, ತಬಲಾ ನಾಗೇಶ ಬೆನಕನಳ್ಳಿ ನಡೆಸಿಕೊಟ್ಟರು.