ಲಿಂಗ ತಾರತಮ್ಯ ತಡೆಗಟ್ಟುವಲ್ಲಿ ಯುವಕರ ಪಾತ್ರ ದೊಡ್ಡದು; ಆರತಿ

0
43

ಕಲಬುರಗಿ; ಸಮಾಜದಲ್ಲಿ ಇಂದಿಗೂ ದಿನನಿತ್ಯವೂ ಸ್ತ್ರೀ- ಪುರುಷರ ನಡುವೆ ತಾರತಮ್ಯ ನಡೆಯುತ್ತಲೇ ಇದ್ದು, ಇಂತಹ ಶೋಷಣೆಗಳನ್ನು ತಡೆಗಟ್ಟಲು ಯುವಕರ ಪಾತ್ರ ಬಹುದೊಡ್ಡದು ಎಂದು ‘ಲಿಂಗತ್ವ ತರಬೇತಿ’ಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಆರತಿ ಸಬರದ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಗಣಕಯಂತ್ರ ವಿಭಾಗದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಸಮಗ್ರ ಶಿಶು ಅಭಿವೃದ್ಧಿ ಹಾಗು ಮಹಿಳಾ ಸಮಾಖ್ಯಾ ಕರ್ನಾಟಕ ಇವರುಗಳ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ‘ಲಿಂಗತ್ವ ತರಬೇತಿ’ ಕಾರ್ಯಾಗಾರದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ಹೀಗೆ ಹಲವಾರು ಶೋಷಣೆಗಳನ್ನು ದಿನವೂ ಕಾಣುತ್ತಿದ್ದೇವೆ. ಪುರುಷರಿಗೆ ಮಹಿಳೆಯರ ಕುರಿತು ಸಕರಾತ್ಮಕ ಮನೋಭಾವನೆಯನ್ನು ಸೃಷ್ಟಿಸಿಕೊಳ್ಳಬೇಕಾಗಿದ್ದು, ಇಂದಿನ
ದಿನಗಳಲ್ಲಿ ಲಿಂಗ ತಾರತಮ್ಯ ಹೆಚ್ಚುತ್ತಿದೆ ಹೀಗಾಗಿ ಯುವಕರು ಮಹಿಳೆಯರ ಜೊತೆ ಸಮಾನತೆಯ ಭಾವನೆಯಿಂದ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

1986ರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಿಂದಲೂ ಕೇಂದ್ರ ಸರ್ಕಾರವು, ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರೂ ಕೂಡಾ ಮಹಿಳೆಯರು ಶೇ. 20 ರಷ್ಟು ಶಿಕ್ಷಣ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಶಿಕ್ಷಣ ವಂಚಿತ ತಾಲೂಕು ಮತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಇದರ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯ ನಮ್ಮ ತಂಡ. ಮಾಡುತ್ತಿದೆ ಎಂದರು.

ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ತಿಪ್ಪಣ್ಣ ಶಿರಸಗಿ ಮಾತನಾಡಿ, ಕುಟುಂಬದಿಂದಲೇ ಗಂಡು-ಹೆಣ್ಣು ಎಂಬ ಬೇಧ ಭಾವನೆ ಬೆಳೆಯುತ್ತಿದ್ದು, ಇಂತಹ ಕೆಟ್ಟ ಮನೋಭಾವನೆ ಬಿಟ್ಟು ಸಮಾನತೆಯ ಕುಟುಂಬ ರಚಿಸಿಕೊಂಡು ಒಳ್ಳೆಯ
ಭಾವನೆಗಳಿಂದ ಉತ್ತಮ ಸಮಾಜ ರೂಪಿಸಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ರೇಣುಕಾ ಪಾಟೀಲ್ ವಿವಿಧ ಚಟುವಟಿಕೆಗಳ ಮೂಲಕ ಲಿಂಗ ಸಮಾನತೆಯ ಕುರಿತಾಗಿ ಉತ್ತಮ
ವಿಚಾರಗಳನ್ನು ವಿದ್ಯಾರ್ಥಿಗಳೊಂದಗೆ ಹಂಚಿಕೊಂಡರು. ಸಮಾರಂಭದಲ್ಲಿ ಡೀನ್ ಡಾ. ಬಸವರಾಜ ಮಠಪತಿ, ಜಿಲ್ಲಾ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಅಧೀಕ್ಷಕ ವೆಂಕಟೇಶ ದೇಶಪಾಂಡೆ ವೇದಿಕೆ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here