ಕಂಡಕ್ಟರ್ ನಿಂದ ಲಂಚ ಪಡೆಯುತಿದ್ದ ಎಫ್‌ಡಿಎ ಅಧಿಕಾರಿ, ಸೇರಿ ಇಬ್ಬರೂ ಎಸಿಬಿ ಬಲೆಗೆ

0
157

ಕಲಬುರಗಿ: ಇಲ್ಲಿನ ಎನ್ಈಕೆಎಸ್ಆರ್‌ಟಿಸಿ ಇಲಾಖೆಯ ಡಿಪೋ ನಂಬರ್ 1ರ ಎಫ್‌ಡಿಎ ಅಧಿಕಾರಿ, ಮತ್ತು ಅಟೆಂಡರ್ ಬಸ್​ ಕಂಡಕ್ಟರ್​ನಿಂದ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಡಿವೈಎಸ್​​ಪಿ ಸುಧಾ ಆದಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಎನ್ಈಕೆಎಸ್ಆರ್‌ಟಿಸಿ ಇಲಾಖೆಯ ಎಫ್​ಡಿಎ ಅಧಿಕಾರಿ ಅಖಿಲ್ ಮತ್ತು ಅಟೆಂಡರ್ ಮುನ್ನಾಭಾಯಿ   25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ದಾಳಕ್ಕೆ ಸಿಕ್ಕಿಬಿದಿದ್ದಾರೆ.

Contact Your\'s Advertisement; 9902492681

ಚಿಂಚೋಳಿ ಬಸ್ ಡಿಪೋದ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವಿದ್ಯಾಧರ, ಕುಟುಂಬದ ಆರೋಗ್ಯ ಸಮಸ್ಯೆ ನಿಮಿತ್ತ 13 ತಿಂಗಳು ರಜೆ ಹಾಕಿದ್ದು, ಈ ರಜೆಯ ಪ್ರಕರಣ ರದ್ದಿಗೆ ಹಾಗೂ ಸಂಬಳ ಸೆಟ್ಲಮೆಂಟ್ ಮಾಡಿರುವ ಹಿನ್ನೆಲೆ ಬಲೆಗೆ ಬಿದ್ದ ಅಧಿಕಾರಿ ಸುಮಾರು 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಡೀಲ್ ಗೆ ಸಂಭದಿಸಿದಂತೆ ಕಚೇರಿಯಲ್ಲಿ ವಿದ್ಯಾಧರ ಅವರಿಂದ 25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿವೈಎಸ್​​ಪಿ ಸುಧಾ ಆದಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ಲಂಚಕೋರ ಸಿಬ್ಬಂದಿಗಳ ಮೇಲೆ ಧಾಳಿ ನಡೆಸಿ ಪರಿಶೀಲಿಸಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here