ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕಿಡಿಗೇಡಿಗೆ ಧರ್ಮದೇಟು

0
165

ಕಲಬುರಗಿ: ಐದು ವರ್ಷದ ಬಾಲಕಿಯನ್ನು ಪಕ್ಕದ ಕಾಂಪ್ಲೆಕ್ಸ್ ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನಿಗೆ ಜನರು ಧರ್ಮದೇಟು ನೀಡಿದ ಘಟನೆ ಇಲ್ಲಿನ ಗೋವಾ ಹೋಟೆಲ್ ಬಳಿ ನಡೆದಿದೆ.

ಮಿರಿಯಾಣಾ ಗ್ರಾಮದ ನಿವಾಸಿ ಪ್ರವೀಣ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇತ, ಇಂದು ನಸುಕಿನ ಜಾವ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ತಾಯಿ ಮತ್ತು ಮಗು ಮಲಗಿದ್ದಾಗ, ಮಗುವನ್ನು ಕರೆತಂದು ಗೋವಾ ಹೋಟೆಲ್ ಬಳಿಯಿರುವ ಬಿಲ್ಡಿಂಗ್‌ವೊಂದರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದಾಗ, ಮಗುವಿನ ಕಿರುಚಾಟ ಗಮನಿಸಿದ ಸ್ಥಳೀಯ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಮಗುವನ್ನು ಕಾಮುಕನಿಂದ ರಕ್ಷಿಸಿದ್ದಾರೆ.

Contact Your\'s Advertisement; 9902492681

ನಂತರ ಕಾಮುಕ ಆರೋಪಿಯನ್ನು ವಿದ್ಯುತ್  ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬ್ರಹ್ಮಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here