ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಗುರುವಾರ ’ರಾಷ್ಟ್ರೀಯ ವಿಜ್ಞಾನ ದಿನ’ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಬೆಂಗಳೂರಿನ ಎಚ್.ಎ.ಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ನೇಮಿಚಂದ್ರ ಉದ್ಘಾಟಿಸಿ, ವಿಧ್ಯಾರ್ಥಿಗಳ ಜೊತೆಗೆ ಚರ್ಚಿಸಿ, ಸಲಹೆ ನೀಡಿದರು.
ಭೌತಶಾಸ್ತ್ರ ವಿಭಾಗದಿಂದ ೧೨, ಗಣೀತಶಾಸ್ತ್ರ ವಿಭಾಗದಿಂದ ೧೭, ಸಸ್ಯಶಾಸ್ತ್ರ ವಿಭಾಗದಿಂದ ೧೩ ಮತ್ತು ಪ್ರಾಣಿಶಾಸ್ತ್ರ ವಿಭಾಗದಿಂದ ೧೩ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನಗೊಳಿಸಿದರು.
ವಿವಿ ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಡಾ.ರಾಮಕೃಷ್ಣ ರೆಡ್ಡಿ, ಡಾ. ನಾಗಬಸವಣ್ಣ ಗುರಾಗೋಳ, ಡಾ.ಅರ್ಜುನ ಶೆಟ್ಟಿ, ಡಾ. ನಾಗಭೂಷಣ ರೆಡ್ಡಿ, ಪ್ರೊ.ರಮೇಶ ಕೆಂಪೆಪಾಟೀಲ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.