ಜಾನಪದ ಕಲಾವಿದರ ದಾಖಲೀಕರಣ ಕಾರ್ಯ ಅಗತ್ಯ: ಪ್ರೊ. ಎಚ್.ಎಂ.‌ಮಹೇಶ್ವರಯ್ಯ

0
130

ಕಲಬುರಗಿ: ಕರ್ನಾಟಕ ವಿಶಿಷ್ಟ ಸಾಂಸ್ಕೃತಿಕ ವಲಯವಾಗಿದ್ದು, ಕನ್ನಡ ತುಂಬಾ ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದು ಸಿಯುಕೆ ಕುಲಪತಿ ಪ್ರೊ. ಎಚ್. ಎಂ.‌ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

ರಂಗಾಯಣ ಕಲಬುರಗಿ ಮತ್ತು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಹಿರಿಯ ಸಾಹಿತಿ ಶ್ರೀ ಗವೀಶ ಹಿರೇಮಠ ಅವರ ‘ಹೊತ್ತು ಮುಳುಗುವ ಮುನ್ನ” ಜನಾರ್ಪಣೆ ಮಾಡಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಇನ್ನೂ ಜಾನಪದ ಜೀವಂತವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಕೃತಿಯಲ್ಲಿ ವೃತ್ತಿರಂಗಭೂಮಿಯ ಐಕಾನ್ ಗಳನ್ನು ಹೆಕ್ಕಿ ತೆಗೆದ ಸಂವೇದನಾಶೀಲ ಬರಹವಾಗಿದ್ದು, ಲೇಖಕರ ಈ ದಾಖಲೀಕರಣ ಕಾರ್ಯ ಮೆಚ್ಚುವಂತಿದೆ ಎಂದರು. ಪುಸ್ತಕ ಕುರಿತು ಡಾ. ಅಮೃತಾ ಕಟಕೆ ಮಾತನಾಡಿ, ೧೦೫ ಕಲಾವಿದರ ಬದುಕು ಕಟ್ಟಿಕೊಡುವ ಕೃತಿ ಇದಾಗಿದೆ. ಅವನತಿಯತ್ತ ಸಾಗಿರುವ ರಂಗಭೂಮಿ ಕುರಿತಾದ ಆಕರ ಗ್ರಂಥವಾಗಿದೆ ಎಂದು ತಿಳಿಸಿದರು.

ಸುಪ್ರಸಿದ್ಧ ಪ್ರಕಾಶಕ ಬಸವರಾಜ ಕೊನೇಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಗದೀಶ್ವರಿ ಶಿವಕೇರಿ ಅತಿಥಿಗಳಾಗಿದ್ದರು.ಲೇಖಕ ಗವೀಶ ಹಿರೇಮಠ ವೇದಿಕೆಯಲ್ಲಿದ್ದರು. ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here