ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಸಚಿವ ನಾರಾಯಣಗೌಡ ಸಂಪುಟದಿಂದ ವಜಕ್ಕೆ ಕರವೇ ಆಗ್ರಹ

0
55

ಕಲಬುರಗಿ: ಕರವೇ ಜಿಲ್ಲಾ ಘಟಕದ ವತಿಯಿಂದ  ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಕನ್ನಡ ದ್ರೋಹಿ ಪೌರಾಡಳಿತ ಸಚಿವ ಕೆ.ಸಿ ನಾರಾಯಣಗೌಡರನ್ನು ಸಚಿವ ಸಂಪುಟದಿಂದ ಕೂಡಲೆ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಅಧ್ಯಕ್ಷ ಮಹೇಶ ಕಾಶಿ ರವರ ನೇತೃತ್ವದಲ್ಲಿ ಜಿಲ್ಲಾ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಜಿಲ್ಲಾ ಪದಾಧಿಕಾರಿಗಳಾದ ಅಶೋಕ ಗುತ್ತೆದಾರ, ತಾಲ್ಲೂಕು ಅಧ್ಯಕ್ಷ ಕುಮಾರ ಕವಡೆ, ಕಾಳಗಿ ಅಧ್ಯಕ್ಷ ಜಾವೀದ ಮಿಯಾ ಅಫಖಾನ್, ಆಳಂದ ಅಧ್ಯಕ್ಷ ಮಾಹಂತೇಶ ಸಣಮನಿ, ಯಡ್ರಾಮಿ ಅಧ್ಯಕ್ಷ ದೇವೇಂದ್ರ ಪಾಟೀಲ್, ತಾಲ್ಲೂಕು ಕಾರ್ಯದರ್ಶಿ ಚೆನ್ನವೀರ, ಚಿತ್ತಾಪುರ ನಗರ ಅಧ್ಯಕ್ಷg ರಾವುಲ್ ಶಾಸ್ತ್ರೀ ಕಾರ್ಯಕರ್ತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here