ಬಸವಾದಿ ಶರಣರು ಸಮಾನತೆಯ ಕ್ರಾಂತಿ ನಡೆಸಿದರು: ಭಾಲ್ಕಿಶ್ರೀ

0
283

ಕಲಬುರಗಿ: ಸಕಲ ಜೀವಾತ್ಮರ ಕಣ್ಣೀರು ಒರೆಸಿದ ಬಸವಣ್ಣನವರು ಹಾಗೂ ಇತರ ಶರಣರು ಸಮಾನತೆಯ ಕ್ರಾಂತಿ ನಡೆಸಿದರು ಎಂದು ಭಾಲ್ಕಿ ಹಿರೇಮಠದ ಗುರು ಬಸವ ಪಟ್ಟದ್ದೇವರು ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಉದ್ಯಾನದ ಆವರಣದಲ್ಲಿ ಕಲಬುರಗಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಪರ ಸಂಘಟನೆ, ಕಾಯಕ ಶರಣರ ಸಮಾಜಗಳ ಆಶ್ರಯದಲ್ಲಿ ನಡೆದ ಲಿಂಗಾಯತ ಧರ್ಮ ಸಂಸ್ಥಾಪಕ, ವಿಶ್ವಗುರು ಬಸವಣ್ಣನವರ ೮೮೬ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರಲ್ಲಿ ತಾಯ್ತನದ ಗುಣವಿತ್ತು. ಅಂತೆಯೇ ದೇಶದ ಮೂಲೆ ಮೂಲೆಗಳಿಂದ ಅವರು ಸ್ಥಾಪಿಸಿದ ಅನುಭವ ಮಂಟಪದೆಡೆಗೆ ಆಕರ್ಷಿತರಾದರು ಎಂದು ಹೇಳಿದರು.
ಬಸವ ವಿಚಾರ ಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥತಂದು ಕೊಡಬೇಕು ಎಂದು ಅವರು ತಿಳಿಸಿದರು.

ಮೌಢ್ಯದ ಜಾಡು ಬಿಡಿಸಿದ ಶರಣರು ವಿಷಯ ಕುರಿತು ಗಂಗಾವತಿಯ ಸುದ್ದಿ ಚಿಂತನ ಪತ್ರಿಕೆ ಸಂಪಾದಕ ಸಿ.ಎಚ್. ನಾರಿನಾಳ ಮಾತನಾಡಿದರು. ಅಕ್ಕಮಹಾದೇವಿ ಆಶ್ರಮದ ಪ್ರಭು ಶ್ರೀ ತಾಯಿ, ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ಮುಖ್ಯ ಅತಿಥಿಯಾಗಿದ್ದರು. ಉತ್ಸವ ಸಮಿತಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಉದ್ಘಾಟಿಸಿದರು.
ಜಗದ್ಗುರು ಗಂಗಾಮಾತೆ ಸಾನ್ನಿಧ್ಯ ವಹಿಸಿದ್ದರು.

ಇದೇವೇಳೆಯಲ್ಲಿ ಶಂಕರ ಪಾಟೀಲ ಬಿಲಗುಂದಿ, ಮಾರುತಿ ಮಾನ್ಪಡೆ, ಮಹಾದೇವ ಮಂಗಾಣೆ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಉಪಾಧ್ಯಕ್ಷ ರಾಜಶೇಖರ ಡೋಂಗರಗಾಂವ ಇತರರನ್ನು ಸನ್ಮಾನಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಬಸವರಾಜ ಮೊರಬದ, ಭೀಮಣ್ಣ ಬೋನಾಳ ಇತರರು ವೇದಿಕೆಯಲ್ಲಿದ್ದರು. ಗಿರಿಜಾದೇವಿ ನೃತ್ಯ ಕಲಾ ತಂಡದವರು ನಡೆಸಿಕೊಟ್ಟ ವಚನ ನೃತ್ಯ ಗಮನಸೆಳೆಯಿತು. ವಿಜಯಕುಮಾರ ತೇಗಲತಿಪ್ಪಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here