ಕಲಬುರಗಿ: ‘ಭಾರತೀಯ ರೆಡ್ ಕ್ರಾಸ್’ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿಯವರು ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು. ಗುರುರಾಜ ಕುಲಕರ್ಣಿ ಮತ್ತು ರಾಹುಲ ರಾಮಗುಲ್ಲ್ ರವರು ಪ್ರಥಮ ಚಿಕಿತ್ಸೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷರಾದ ಡಾ. ಶಿವಾನಂದ ದೇವರಮನಿ, ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಠಾಳೆ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ. ಎಸ್. ಎ. ಪಾಟೀಲ, ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಪ್ರೇಮಚಂದ ಚವ್ಹಾಣ, ನ್ಯಾಕ್ ಸಂಯೋಜಕರಾದ ಡಾ. ಎ.ಜಿ.ಪೋಲೀಸ ಪಾಟೀಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿಯಾದ ಡಾ. ಪ್ರಾಣೇಶ ಎಸ್., ಹಾಗೂ ಸಮಸ್ತ ಬೊಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.