ಬ್ಯಾಂಕ್ ನೌಕರರ ಬೇಡಿಕೆಗಳ ಪರಿಹಾರಕ್ಕೆ ಸಂಸದ ಜಾಧವ್ ಗೆ ಮನವಿ

0
98

ಕಲಬುರಗಿ; ವಿವಿಧ ಬೇಡಿಕೆ ಈಡೇರಿಕೆಗಾಗಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ ಸೇರಿ 9 ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಸ್ಪಂದಿಸಬೇಕೆಂದು ಇಂದು ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

30 ತಿಂಗಳಿಗಿಂತ ಹೆಚ್ಚು ಮಾತುಕತೆಗಳ ಹೊರತಾಗಿಯೂ, ವೇತನ ಹೆಚ್ಚಳವನ್ನು ಸಮಂಜಸವಾದ ಆಧಾರದ ಮೇಲೆ ಇತ್ಯರ್ಥಪಡಿಸಲು ಐಬಿಎಗೆ ಸಾಧ್ಯವಾಗುತ್ತಿಲ್ಲ ವೈಯಕ್ತಿಕ ಹಸ್ತಕ್ಷೇಪವನ್ನು ಬಯಸುತ್ತೇವೆ ಮತ್ತು ಇಂಡಿಯನ್ ಬ್ಯಾಂಕ್‌ಗೆ ಸಲಹೆ ನೀಡಿ ಸಮಸ್ಯೆ ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ ವಿವಿಧ ಬೇಡಿಕೆಗಳನ್ನು ಪರಿಹರಿಬೇಕೆಂದು ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದು, ಸಂಸದ ಡಾ, ಉಮೇಶ್ ಜಾಧವ್ ಅವರ ಮೂಲಕ ತಮ್ಮ ಸಮಸ್ಯೆಯನ್ನು ಮನವಿಗಾಗಿ ಸಂಸದರಲ್ಲಿ ಮನವಿ ಮಾಡಿಲಾಗಿದೆ ಎಂದು ಯೂನಿಯನ್ ಸದಸ್ಯ, ಆಂದ್ರಾ ಬ್ಯಾಂಕ್ ನೌಕರರಾದ ಎ,ಆರ್ ಚಂದ್ರಮೊಹನ್ ತಿಳಿಸಿದ್ದಾರೆ.

Contact Your\'s Advertisement; 9902492681

ಈ ವೇಳೆಯಲ್ಲಿ ಕ್ಯಾನೆರಾ ಬ್ಯಾಂಕ್ ನೌಕರರ ಸತೀಶ್ ಚೌವ್ಹಾಣ, ನಾರಾಯಣ್ ರೋಗಿ, ಶ್ರೀಧರ್ ಡಿ, ರವಿಗೌಡ, ರವಿಶಂಕರ್, ವಿಜಯಕುಮಾರ್, ಸಂತೋಷ್ ಫರ್ಮಾ, ಸಂತೋಷ, ನವೀನ್ ಕಾಗಲಿಕರ್, ಅದೀಪ್, ಯುಕೊ ಬ್ಯಾಂಕ್ನ ವೆಂಕಟೇಶ್, ಗಂಗಾರಾಮ್, ರಾಮ್ ಎಸ್ ದರ್ಗಿ, ಶಿವುಕುಮಾರ, ಯಳವಾರ್ ಚಂದ್ರಾಮ್, ಕೀರಣ್ ಎಸ್. ಸಕ್ರೆ, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here