ಮನೆ ಮದ್ದಿನಲ್ಲಿ ಎಲ್ಲಾ ರೋಗ ಕಳೆಯುವ ಶಕ್ತಿಯಿದೆ: ಶಿವಲಿಂಗಪ್ಪ ಪುಟಗಿ

0
102

ಸುರಪುರ: ಭಾರತೀಯ ಪರಂಪರೆಯಲ್ಲಿ ಆಯುರ್ವೇದಕ್ಕೆ ಪ್ರಮುಖವಾದ ಸ್ಥಾನವಿದೆ.ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಕೇವಲ ವನಸ್ಪತಿ ರೂಪದ ಆಹಾರ ಪದ್ಧತಿಯಿಂದಲೆ ನೂರಾರು ವರ್ಷಗಳು ಆರೋಗ್ಯವಂತರಾಗಿ ಬಾಳಿದ ಇತಿಹಾಸದ ಸಂಗತಿಗಳನ್ನು ನಾವು ಕಾಣಬಹುದಾಗಿದೆ. ಇಂದು ನಮ್ಮ ಮನೆಗಳಲ್ಲಿರುವ ಅನೇಕ ಆಹಾರ ಪದಾರ್ಥದ ವಸ್ತುಗಳೆ ಎಲ್ಲಾ ರೋಗಗಳನ್ನು ಕಳೆಯುವ ಶಕ್ತಿ ಹೊಂದಿವೆ ಎಂದು ಯಾದಗಿರಿ ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ಮಾತನಾಡಿದರು.

ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಜಿಲ್ಲಾ ಪಂಚಾಯತಿ ಯಾದಗಿರಿ ಮತ್ತು ಜಿಲ್ಲಾ ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆಯುಷ್ ಸೆಮಿನಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ: ಎಂ.ಬಿ.ಪಾಟೀಲ ಮಾತನಾಡಿ,ನಮ್ಮ ಮನೆಗಳಲ್ಲಿರುವ ಜೀರಿಗೆ,ಬೆಳ್ಳುಳ್ಳಿ,ಅರಿಷಿಣ,ಮೆಂತೆ ಸೇರಿದಂತೆ ಅನೇಕ ವಸ್ತುಗಳಲ್ಲಿ ಔಷಧಿಯ ಗುಣಗಳಿದ್ದು ಕೆಮ್ಮು ನೆಗಡಿ ಜ್ವರ ತಲೆ ನೋವಿನಂತ ಕಾಯಿಲೆಗಳಿಗೆ ಮನೆ ಮದ್ದಿನಿಂದಲೆ ಪರಿಹಾರ ದೊರೆಯುತ್ತದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಸಂಪನ್ಮೂಲ ವ್ಯಕ್ತಿ,ಗಂಗಾಧರ ಸರಾಫ್ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗೆ ದೈನಂದಿನ ದಿನಚರಿಯ ಬಗ್ಗೆ ಗಮನ ಹರಿಸುವುದು ಅವಶ್ಯವಾಗಿದೆ.ದೈನಂದಿನ ದಿನಚರಿಯ ಮೂಲಕ ಅನೇಕ ಕಾಯಿಲೆಗಳನ್ನು ಬರದಂತೆ ತಡೆಯುವ ಶಕ್ತಿ ಇದೆ.ನಿತ್ಯವು ಬೆಳಿಗ್ಗೆ ನಡಿಗೆ,ಯೋಗ ಮತ್ತು ಸರಿಯಾದ ಸಮಯಕ್ಕೆ ಊಟ,ನಿದ್ದೆ ಇವುಗಳಿಂದ ಯಾವುದೆ ಕಾಯಿಲೆ ಬರದಂತೆ ತಡೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮವನ್ನು ತಾಲೂಕು ಪಂಚಾಯತಿ ಅಧ್ಯಕ್ಷೆ ಶಾರದಾ ಬಿ.ಬೇವಿನಾಳ ಉದ್ಘಾಟಿಸಿದರು,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ,ಜಿಲ್ಲಾ ಆಯುಷ್ ಅಧಿಕಾರಿ ಪ್ರಕಾಶ ರಾಜಾಪುರ,ವಸತಿ ನಿಲಯದ ಮೇಲ್ವಿಚಾರಕಿ ಚಂದ್ರಕಲಾ,ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಇಬ್ರಾಹಿಂ ವೇದಿಕೆ ಮೇಲಿದ್ದರು. ಮನೋಜ ನಾಯಕ ನಿರೂಪಿಸಿದರು,ಬಸವರಾಜ ನಾಯ್ಕೋಡಿ ಸ್ವಾಗತಿಸಿದರು,ಡಾ: ಸಂಜಯ್ ಕುಲಕರ್ಣಿ ವಂದಿಸಿದರು.ವಸತಿ ನಿಲಯದ ಎಲ್ಲಾ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here