ಸುರಪುರ: ನಗರದ ಪ್ರತಿಷ್ಠೀತ ಸಹಕಾರಿ ಸಂಘದಲ್ಲಿ ಒಂದಾಗಿರುವ ಸುರಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಉಪಾಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸಲಾಯಿತು.
ಒಟ್ಟು ೧೫ ಜನ ನಿರ್ದೇಶಕರಿರುವ ಸಂಘಕ್ಕೆ ಶನಿವಾರ ಬೆಳಿಗ್ಗೆ ನಡೆದ ಚುನಾವಣಾ ಪಕ್ರೀಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಾ ಮುಕುಂದ ನಾಯಕ ಹಾಗು ರಾಜಾ ರಂಗಪ್ಪ ನಾಯಕ (ಆರ್.ಆರ್.ನಾಯಕ) ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಅದೇರೀತಿ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ ಹೊಸ್ಮನಿ ಹಾಗು ಮಹೇಶರಡ್ಡಿ ಚವ್ವಾ ತಮ್ಮ ನಾಮಪತ್ರ ಸಲ್ಲಿಸಿದರು.ನಂತರ ನಡೆದ ಗುಪ್ತ ಮತದಾನದಲ್ಲಿ ೮ ಮತಗಳನ್ನು ಪಡೆದ ರಾಜಾ ರಂಗಪ್ಪ ನಾಯಕ (ಆರ್.ಆರ್.ನಾಯಕ) ಅಧ್ಯಕ್ಷರಾಗಿ ಆಯ್ಕೆಯಾದರು,೭ ಮತಗಳನ್ನು ಪಡೆದ ರಾಜಾ ಮುಕುಂದ ನಾಯಕ ಒಂದು ಮತಗಳಿಂದ ಸೋಲನುಭವಿಸಿದರು.
ಇದೇ ಸಂದರ್ಭದಲ್ಲಿ ನಡೆದ ಉಪಾಧ್ಯಕ್ಷ ಸ್ಥಾನದ ಮತದಾನದಲ್ಲಿ ೮ ಮತಗಳನ್ನು ಪಡೆದು ವೆಂಕಟೇಶ ಹೊಸ್ಮನಿ ಜಯಶೀಲರಾದರೆ,೭ ಮತಗಳನ್ನು ಪಡೆದ ಮಹೇಶರಡ್ಡಿ ಚವ್ವಾ ಇವರೂ ಒಂದು ಮತಗಳಿಂದ ಸೋಲನುಭವಿಸಿದರು. ನಂತರ ನಡೆದ ಮತ ಎಣಿಕೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಭೀವೃಧ್ಧಿ ಅಧಿಕಾರಿ ಮಲ್ಲಿಕಾರ್ಜುನ ಅಧ್ಯಕ್ಷ ಉಪಾಧ್ಯಕ್ಷರ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜ ರಂಗಪ್ಪ ನಾಯಕ ಪ್ಯಾಪ್ಲಿ,ಮುನವರ ಅರಕೇರಿ,ರಾಕೇಶ ಹಂಚಾಟೆ,ರಾಜಾ ರಾಮಪ್ಪ ನಾಯಕ (ಜೇಜಿ),ಪ್ರಕಾಶ ಸಜ್ಜನ್,ಛಾಯಾ ಕುಂಟೋಜಿ,ಪಾರ್ವತಿ ಇನಾಂದಾರ,ತೌಫೀಕ್ ಅಹ್ಮದ್,ಮಹೇಶ ಜೇವರ್ಗಿ,ಪಾರಪ್ಪ ಗುತ್ತೇದಾರ,ಮರೆಪ್ಪ ನಾಯಕ ಡೊಣ್ಣಿಗೇರಾ ಸೇರಿದಂತೆ ಅನೇಕರಿದ್ದರು.