ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

0
86

ಕಲಬುರಗಿ: ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ’ಎ’ ಮತ್ತು ’ಬಿ’ ಗಳ ೨೦೧೯-೨೦ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ನಗರದ ಹನುಮಾನ ತಾಂಡಾದಲ್ಲಿರುವ ಕೊರಂಟಿ ಹನುಮಾನ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಸ್ಪೂರ್ತಿ, ಕೀರ್ತಿ, ವೈಷ್ಣವಿ ಮತ್ತು ಪವಿತ್ರಾ ಅವರು ಹಾಡಿರುವ ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಗೂ ಸದ್ಭಾವನಾ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಮಂಡಳಿಯ ಅಧ್ಯಕ್ಷರಾದ ಡಾ. ರಾಜೇಂದ್ರ ಬಿ. ಕೊಂಡಾ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಮಹಾವಿದ್ಯಾಲಯ ಹಾಗೂ ರಾ. ಸೇ. ಯೋ ಘಟಕ ’ಎ’ ಮತ್ತು ’ಬಿ’ ಗಳ ಪರವಾಗಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ’ಬಿ’ ಕಾರ್ಯಕ್ರಮಾಧಿಕಾರಿಗಳಾದ ಡಾ. ಮೋಹನರಾಜ್ ಪತ್ತಾರ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭಕ್ಕೆ ಮುಖ್ಯತಿಥಿಗಳಾಗಿ ಆಗಮಿಸಿದ  ರಾಜು. ಕಮಲಾಪುರಕರ್, ಧರ್ಮಾದಿಕಾರಿಗಳು, ಕೋರಂಟಿ ಹನುಮಾನ ದೇವಸ್ಥಾನ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸತೀಶಚಂದ್ರ ಹಡಗಲಿಮಠ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ಅಭಿವೃದ್ದಿ ಮಂಡಳಿಯ ಸದಸ್ಯರು ಇವರುಗಳ ಪರಿಚಯವನ್ನು ನೀಡಿ ಸನ್ಮಾನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಕೊನೆಯಲ್ಲಿ ಯುವ ಶಕ್ತಿ ದೇಶದ ಶಕ್ತಿ ಹಾಗೂ ಇಂದಿನ ಯುವತಿಯರೇ ನಾಳಿನ ನಾಯಕಿಯರು ಎಂದು ಹೇಳಿದರು.

Contact Your\'s Advertisement; 9902492681

ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೋಂಡ ಶಿಬಿರಾರ್ಥಿಗಳನ್ನು ಅಕ್ಕಮಹಾದೇವಿ ತಂಡ, ಕಲ್ಪಾನಾ ಚಾವ್ಲಾ ತಂಡ, , ರಾಣಿ ಚೆನ್ನಮ್ಮ ತಂಡ ಮತ್ತು ಗಂಗೂಬಾಯಿ ಹಾನಗಲ್ ತಂಡ ಎಂಬ ಐದು ತಂಡಗಳಾಗಿ ವಿಂಗಡಿಸಿ ಒಂದೊಂದು ತಂಡಕ್ಕೆ ಒಂದೊಂದು ದಿನದ ನಿರ್ವಹಣೆಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಅಕ್ಕಮಹಾದೇವಿ ತಂಡ ಅತಿಥಿಗಳ ಸತ್ಕಾರಕ್ಕಾಗಿ, ಕಲ್ಪಾನಾ ಚಾವ್ಲಾ ತಂಡ ಸ್ವಚ್ಛತೆ ಪ್ರಾಶಸ್ತ್ಯ ನೀಡಿರುವುದಕ್ಕಾಗಿ, ಸಾಲು ಮರದ ತಿಮ್ಮಕ್ಕ ತಂಡ ಧ್ವಜಸ್ತಂಭದ ಅಲಂಕಾರಕ್ಕಾಗಿ, ರಾಣಿ ಚೆನ್ನಮ್ಮ ತಂಡ ಕಾಲ ನಿರ್ವಹಣೆಗಾಗಿ ಮತ್ತು ಗಂಗೂಬಾಯಿ ಹಾನಗಲ್ ತಂಡ ಒಳ್ಳೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೀಡಿರುವುದಕ್ಕಾಗಿ ಬಹುಮಾನವನ್ನು ನೀಡಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೋಂಡ ಶಿಬಿರಾರ್ಥಿಯಾದ ಪೂಜಾ ಶಿಬಿರದ ವರದಿಯನ್ನು ಸಲ್ಲಿಸಿದರು. ಅಶ್ವಿನಿ ರೆಡ್ಡಿ, ಕುಮಾರಿ. ಫರ‍್ಹಾ ಮತ್ತು ಕುಮಾರಿ. ಭಾಗ್ಯಶ್ರೀ ಸಾಲಿಮಠ ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ ರಾಜು. ಕಮಲಾಪುರಕರ್, ಧರ್ಮಾದಿಕಾರಿಗಳು, ಹನುಮಾನ ದೇವಸ್ಥಾನ ಕಲಬುರಗಿಯರು ಮಾತನಾಡುತ್ತಾ ವಿದ್ಯಾರ್ಥಿನಿಯರಲ್ಲಿ ಸೇವಾ ಮನೋಭಾವನೆ, ಶಿಸ್ತು ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ. ಜೀವನದಲ್ಲಿ ಇವುಗಳ ಕುರಿತು ಮಹತ್ವವನ್ನು ನೀಡಿದರೆ ಸಲಿಸಾಗಿ ನಮ್ಮ ಗುರಿಯನ್ನು ತಲುಪಬುಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳ ಅಭಿವೃದ್ದಿ ಮಂಡಳಿಯ ಸದಸ್ಯರಾಗಿರುವ  ಸತೀಶಚಂದ್ರ. ಹಡಗಿಲಮಠ ಅವರು ವಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್. ಎಸ್. ಎಸ್) ಒಂದು ಅನುಭವ, ಇದರ ಧ್ಯೇಯ ವಾಕ್ಯ ನನಗಲ್ಲ, ನಿನಗೆ ಬಲಿಷ್ಠ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಇದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕುರಿತಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ. ಶಕಂತಲಾ ಬಿ, ಡಾ. ಸುಮಂಗಲಾ, ರಾಷ್ಟ್ರೀಯ ಸೇವಾ ಯೋಜನೆ ಸಲಹಾ ಮಂಡಳಿಯ ಸದಸ್ಯರಾದ ಡಾ. ಶರಣಮ್ಮ ಕುಪ್ಪಿ, ಡಾ. ನೀಲಕಂಠ ವಾಲಿ, ಡಾ. ಮಹೇಶಕುಮಾರ ಗಂವ್ಹಾರ, ಡಾ. ಕನ್ಯಾಕುಮಾರಿ, ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಾದ ಶ್ರೀಕಾಂತ, ಸಿದ್ದು ಮಠ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ’ಎ’ ಮತ್ತು ’ಬಿ’ ಘಟಕಗಳ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು. ಕುಮಾರಿ. ಸಭಾ ರಾಷ್ಟ್ರೀಯ ಸೇವಾ ಯೋಜನೆ ಘಟಕ ’ಎ’ ಮತ್ತು ’ಬಿ’ ಪರವಾಗಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here