ಶಹಾಪುರ: ಬಾಬಾ ಸಾಹೇಬರ ತತ್ವಗಳನ್ನು ಪಾಲಿಸಿ: ಖರ್ಗೆ

0
157

ಶಹಾಪುರ: ಬುದ್ಧ, ಬಸವ, ಡಾ. ಅಂಬೇಡ್ಕರ್ ತತ್ವಗಳನ್ನು ಎಲ್ಲರೂ ಪಾಲಿಸಬೇಕಾಗಿದೆ. ಜಾತಿ ಪದ್ದತಿ ನಿರ್ಮೋಲನೆಗೆ ಬಾಬಾ ಸಾಹೇಬರು ಅನೇಕ ಕಾನೂನುಗಳನ್ನು ತಂದರೂ ಸಹ ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶಹಾಪುರ ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರ ಅನುಭವ ಮಂಟಪದಲ್ಲಿ ಹಿಂದುಳಿದ ಸಮಾಜದವರಿಗೆ ಅಧ್ಯಕ್ಷರಾಗಿ ಮಾಡಿದರು. ನಂತರ ಎಲ್ಲರೂ ಒಂದೇ ಎಂದು ಲಿಂಗದರಿಸಿ ಲಿಂಗ ಕಟ್ಟಿಕೊಂಡರು. ಬಸವಣ್ಣನವರ ವಿಚಾರ ದೇಶದಲ್ಲಿರುವ ಪ್ರತಿಯೊಬ್ಬರೂ ಅಳವಡಿಸಿಕೊಂಡಿದ್ದರೆ ಜಾತಿ ವ್ಯವಸ್ಥೆ ಇರುತ್ತಿರಲಿಲ್ಲ. ಆದ್ದರಿಂದ ಎಲ್ಲರೂ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಬೆಳೆಸಬೇಕು. ಅವರ ತತ್ವಗಳು ಸಂವಿಧಾನಕ್ಕೆ ಪುಷ್ಠಿ ನೀಡುವಂತಹವುಗಳಾಗಿವೆ ಎಂದು ತಿಳಿಸಿದರು.

ನಮ್ಮ ಪ್ರದೇಶ ನಂಜುಂಡಪ್ಪರವರ ವರದಿ ಪ್ರಕಾರ ಅತ್ಯಂತ ಹಿಂದುಳಿದಾಗಿದೆ. ಈ ಭಾಗಕ್ಕೆ ಸರ್ಕಾರ ಯೋಚನೆ ಮಾಡಬೇಕು. ಈ ಭಾಗದ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಒಂದಾಗಬೇಕಾಗಿದೆ. ಕನಿಷ್ಠ 2000 ಕೋಟಿ ಅನುದಾನ ಈ ಭಾರಿ ಈ ಭಾಗಕ್ಕೆಶಿಪಾರಸ್ಸು ಮಾಡಬೇಕು. ಭಾಗದ ಅಭಿವೃದ್ಫಿಗಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ.

ಈ ಸಂದರ್ಭದಲ್ಲಿ ಮಾಜಿ ಮಂತ್ರಿ ಹಾಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ. ಲೊಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ. ಎಮ್.ಎಲ್.ಸಿ ಬಸವರಾಜಪ್ಪಗೌಡ ಇಟಗಿˌ ಜಿ.ಪಂಅಧ್ಯಕ್ಷರಾದ ರಾಜಶೇಖರ ವಜ್ಜಲ
ಮಾಜಿ‌ ಎಮ್.ಎಲ್.ಸಿ ಅಮಾತೆಪ್ಪ ಕಂದಕೂರˌ ಚೆನ್ನರಡ್ಡಿ ಪಾಟಿಲ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು, ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here