ಸುರಪುರ: ಯಾವುದೆ ಸಮಸ್ಯೆಯ ಬಗ್ಗೆ ಹೇಳುವಲ್ಲಿ ಇಂತಹ ಪ್ರಕರಣ ಅಥವಾ ಘಟನೆ ಎಂದು ಸ್ಪಷ್ಟವಾಗಿ ಹೇಳಿದಲ್ಲಿ ಸಂಬಂಧಿಸಿದವರೊಂದಿಗೆ ಚರ್ಚಿಸಲು ಅನುಕೂಲವಾಗಲಿದೆ ಅಲ್ಲದೆ ಮುಂದಿನಿಂದ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ದಲಿತ ಸಭೆ ನಡೆಸಲು ಮುಂದಾಗುವುದಾಗಿ ಹಾಗು ಎಲ್ಲಾ ಗ್ರಾಮಗಳಲ್ಲಿ ಬೀಟ್ ಪೋಲಿಸರ ಮಾಹಿತಿ ಫಲಕ ಹಾಕಿಸುವ ಜೊತೆಗೆ ದಲಿತ ಕೇರಿಗಳಲ್ಲಿನ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯ್ತನ ಮಾಡುವುದಾಗಿ ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ ಮಾತನಾಡಿದರು.
ನಗರದ ಪೋಲಿಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸುರಪುರ ಉಪ ವಿಭಾಗದ ಎಲ್ಲಾ ಠಾಣಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ದಲಿತ ಸಭೆಯ ಅಧ್ಯಕ್ಷತೆ ವಹಿಸಿ ಅನೇಕ ದಲಿತ ಸಂಘಟಕರು ಹೇಳಿಕೊಂಡ ಸಮಸ್ಯೆಗಳ ಕುರಿತು ಮಾತನಾಡಿ, ನಾನು ಸುರಪುರ ಉಪ ವಿಭಾಗಕ್ಕೆ ಬಂದ ಮೇಲೆ ಮೊದಲನೆ ದಲಿತ ಸಭೆ ನಡೆಸುತ್ತಿದ್ದು,ಇಂದಿನ ಸಭೆಯಲ್ಲಿನ ಎಲ್ಲಾ ಮುಖಂಡರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡು ಪರಿಹರಿಸಲು ಮುಂದಾಗುವೆವು.
ಅನೇಕರು ಗ್ರಾಮೀಣ ಭಾಗದಲ್ಲಿನ ಅಕ್ರಮ ಮದ್ಯ ಮತ್ತು ಜೂಜು ಹಾಗು ಮಟಕಾ ದಂಧೆ ಬಗ್ಗೆ ಹೇಳಿರುವಿರಿ.ನಾನು ಬಂದನಂತರ ಇದುವರೆಗೆ ಅತಿ ಹೆಚ್ಚು ಮಟಕಾ ಕೇಸುಗಳನ್ನು ದಾಖಲಿಸಲಾಗಿದೆ.ಅಲ್ಲದೆ ಅಕ್ರಮ ಸಾರಾಯಿ ಮಾರುವವರ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಇಸ್ಪಿಟ್ ಆಡುವವರ ಮೇಲು ಅನೇಕ ಕೇಸುಗಳನ್ನು ದಾಖಲಿಸಲಾಗಿದೆ.ಮಟಕಾ ಬರೆಯುವವರು ನಿಲ್ಲಿಸಬೇಕು ಇಲ್ಲವಾದರೆ ಅಂತವರ ಮೇಲೆ ಕೇಸು ದಾಖಲಿಸುವ ಜೊತೆಗೆ ಗಡಿಪಾರಿಗು ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಎಲ್ಲರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ,ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಹತ್ತು ಸಾವಿರ ವರೆಗೂ ದಂಡ ಬೀಳಲಿದೆ.ಮೋಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸಿದರು ದಂಡ ಬೀಳಲಿದೆ.ಇನ್ನು ಆಟೋ ಮತ್ತು ಜೀಪುಗಳ ಮೇಲೆ ಪ್ರಯಾಣಿಕರ ಕೂಡಿಸುವುದನ್ನು ತಪ್ಪಿಸಲು ಮೇಲೆ ಹಾಕಿದ ಕ್ಯಾರಿಯರ್ ತೆಗೆಸಲಾಗಿದೆ ಎಂದರು.ಗ್ರಾಮ ದೇವತೆ ಹೆಸರಲ್ಲಿ ಕುರಿ ಕೋಣ ಬಲಿ ತಡೆಯುವಂತೆ ಕೇಳಿದ ಪ್ರಶ್ನೆಗೆ ವಿವರಣೆ ನೀಡಿ,ಅನೇಕ ಗ್ರಾಮಗಳಲ್ಲಿ ಕೋಣ ಬಲಿ ತಡೆಯಲಾಗಿದೆ.ಅಲ್ಲದೆ ಜಾತ್ರೆ ನಡೆಸುವವರಿಗೆ ತಿಳಿ ಹೇಳಿ ಅವರಿಂದ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾ ಭೀಮರಾಯ ಸಿಂದಗೇರಿ,ವೆಂಕಟೇಶ ಬೇಟೆಗಾರ,ಶಿವಲಿಂಗ ಹಸನಾಪುರ,ವೆಂಕಟೇಶ ನಾಯಕ ಬೈರಿಮಡ್ಡಿ,ಬಲಭೀಮ,ನಿಂಗಣ್ಣ ಗೋನಾಲ,ಶಾಂತಪ್ಪ ಸಾಲಿಮನಿ,ಧರ್ಮರಾಜ ಬಡಿಗೇರ,ಮಹಾದೇವಪ್ಪ ಇತರರು ಮಾತನಾಡಿದರು.ಸಮಾಜ ಕಲ್ಯಾಣಾಧಿಕಾರಿ ಇಬ್ರಾಹಿಂ ಇಲಾಖೆಯಲ್ಲಿನ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಸುರಪುರ ಪಿಐ ಆನಂದರಾವ್ ಸ್ವಾಗತಿಸಿದರು,ಪೇದೆ ಚಂದ್ರಶೇಖರ ನಿರೂಪಿಸಿದರು,ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರ ವಂದಿಸಿದರು.
ಹುಣಸಗಿ ಸಿಪಿಐ ವೀರಭದ್ರಯ್ಯ ಹಿರೇಮಠ, ಕೆಂಭಾವಿ ಪಿಎಸೈ ಸುದರ್ಶಬರಡ್ಡಿ, ಹುಣಸಗಿ ಪಿಎಸ್‌ಐ ಎನ್.ಎಸ್.ಜನಗೌಡ, ನಾರಾಯಣಪುರ ಪಿಎಸ್‌ಐ ಅರ್ಜುನಪ್ಪ, ಗೋಗಿ ಪಿಎಸ್‌ಐ ಸೋಮಲಿಂಗಪ್ಪ ಒಡೆಯರ್, ಭೀಗುಡಿ ಪಿಎಸ್‌ಐ ರಾಜಕುಮಾರ, ಸುರಪುರ ಪಿಎಸ್‌ಐ ಶರಣಪ್ಪ ಹಾಗು ಕೊಡೇಕಲ್ ಪಿಎಸ್‌ಐ ಬಾಷುಮೀಯಾ ಹಾಗು ಶಹಾಫುರ ಸಮಾಜ ಕಲ್ಯಾಣಾ ಇಲಾಖೆ ಸಹಾಯಕ ನಿರ್ದೇಶಕ ವೇದಿಕೆ ಮೇಲಿದ್ದರು.ದಲಿತ ಸಂಘಗಳ ಮುಖಂಡರಾದ ರಮೇಶ ದೊರೆ ಅಲ್ದಾಳ, ದುರ್ಗಪ್ಪ ನಾಗರಾಳ, ಮಲ್ಲು ಬಿಲ್ಲವ್. ತಿಪ್ಪಣ್ಣ ಶೆಳ್ಳಿಗಿ, ಶಿವರಾಜ ನಾಯಕ, ದಾನಪ್ಪ ಲಕ್ಷ್ಮೀಪುರ, ಮಡಿವಾಳಪ್ಪ ಕಟ್ಟಿಮನಿ, ಹಣಮಂತ ಕಟ್ಟಿಮನಿ, ರಾಜು ದೊಡ್ಮನಿ, ಚಂದ್ರಾಮ ಕಟ್ಟಿಮನಿ, ಲಕ್ಷ್ಮಣ, ಭೀಮರಾಯ ಜುನ್ನಾ, ಶೇಖರ ಬಾರಿಗಿಡ, ಶಾಂತಪ್ಪ ಹಸನಾಪುರ, ಮಹಾದೇವ ದಿಗ್ಗಿ, ಹಣಮಂತ ರಾಠೋಡ ಸೇರಿದಂತೆ ಅನೇಕರಿದ್ದರು.