ಬೋನ್ಹಾಳ ಗ್ರಾಮದಲ್ಲಿನ ವಿವಿಧ ಸಮಸ್ಯೆಗಳ ನಿವಾರಣೆಗೆ ಧರಣಿ ಸತ್ಯಾಗ್ರಹ

0
145

ಸುರಪುರ: ಬೋನ್ಹಾಳ ಗ್ರಾಮದ ದಲಿತ ಕೇರಿಯಲ್ಲಿನ ಸಮಸ್ಯೆಗಳ ನಿವಾರಿಸಲು ಮನವಿ ಮಾಡಿದರು ಅಧಿಕಾರಿಗಳು ಕ್ಯಾರೆ ಎನ್ನದಿರುವುದನ್ನು ಖಂಡಿಸಿ ಬೇಡಿಕೆಗಳು ಈಡೇರುವವರೆಗೆ ಹಾಗು ಆಲ್ದಾಳ ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಬೇಜವಬ್ದಾರಿತನದ ವ್ಯಕ್ತಿಯಾಗಿದ್ದು,ಅವರನ್ನು ಅಮಾನತು ಮಾಡುವವರೆ ನಿರಂತರ ಧರಣಿ ನಡೆಸುವುದಾಗಿ ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಮಾತನಾಡಿದರು.

ನಗರದ ತಾಲೂಕು ಪಂಚಾಯತಿ ಕಛೇರಿ ಮುಂದೆ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿ,ಬೋನ್ಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರವಿದೆ.ದಲಿತರ ಕೇರಿಗಳಲ್ಲಿ ಸರಿಯಾದ ರಸ್ತೆ,ಚರಂಡಿಗಳಿಲ್ಲ.೨೦೧೭-೧೮ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ಅರ್ಧಂಬರ್ಧ ಮಾಡಿದ್ದು ಕಾಮಗಾರಿ ಪೂರ್ಣಗೊಳಿಸದೆ ಹಣ ನುಂಗಿ ನೀರು ಕುಡಿದಿದ್ದಾರೆ.ಇದರ ಕುರಿತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.ಗ್ರಾಮದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ ನಾಮಫಲಕದ ಬಳಿ ಗುಡಿಸಲು ಹಾಕಿದ್ದು ಅದನ್ನು ತೆರವುಗೊಳಿಸಿ ಆ ಕುಟುಂಬಕ್ಕೆ ಸರಿಯಾದ ಸ್ಥಳದ ವ್ಯವಸ್ಥೆ ಕಲ್ಪಿಸಲು ಹಾಗು ನಾಮಫಲಕದ ಸ್ಥಳದಲ್ಲಿ ತಿಪ್ಪೆಗುಂಡಿಗಳಿದ್ದು ಸ್ವಚ್ಛಗೊಳಿಸಲು ಮನವಿ ಮಾಡಿದರು. ಪ್ರಯೊಜನೆಯಾಗುತ್ತಿಲ್ಲ.ಆದ್ದರಿಂದ ಕೂಡಲೆ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಮತ್ತು ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ತಿಳಿಸಿದರು.

Contact Your\'s Advertisement; 9902492681

ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಧರಣಿ ನಿರತರೊಂದಿಗೆ ಮಾತನಾಡಿ,ಇನ್ನೆರಡು ದಿನದಲ್ಲಿ ಬೋನ್ಹಾಳ ಗ್ರಾಮಕ್ಕೆ ಬಂದು ಪರೀಶಿಲನೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ಪತ್ರ ಬರೆದುಕೊಟ್ಟರು ಅಲ್ಲದೆ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಮಾತನಾಡಿ ಹದಿನೈದು ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ ಬಗ್ಗೆ ತಿಳಿಸಿ ಅರ್ಧಕ್ಕೆ ನಿಂತ ಕಾಮಗಾರಿಗಳ ಆರಂಭಿಸುವ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಧರಣಿಯನ್ನು ನಿಲ್ಲಿಸಲಾಯಿತು.

ಧರಣಿಯಲ್ಲಿ ನಿಂಗಣ್ಣ ಗೋನಾಲ, ರಾಮಣ್ಣ ಶೆಳ್ಳಿಗಿ, ಸೇನೆ ತಾಲೂಕಾಧ್ಯಕ್ಷ ರಾಜು ಬಡಿಗೇರ, ನಬಿಸಾಬ್ ಗೊಡೆಕಾರ್, ಶೇಖ್ ಅಲಿ, ಶರಣು ಬೂತಾಳಿ, ಚಂದಪ್ಪ ಪಂಚಮ್, ಹಣಮಂತ ರತ್ತಾಳ, ಮಾನಪ್ಪ ರತ್ತಾಳ, ಮರೆಪ್ಪ ನಾಟೆಕಾರ್, ಶರಣಪ್ಪ ಹುಲಿಮನಿ, ಶಿವಣ್ಣ ಸಾಸಗೇರಾ, ಪರಶು ನಾಟಿಕಾರ್, ಉಮೇಶ ಹುಲಿಮನಿ, ಬಡೆಸಾಬ ಬೋನಾಳ, ಶರಣು ಹುಲಿಮನಿ, ಮಹ್ಮದ್ ಗೌಸ್, ಮಶಾಖ್ ಪಟೇಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here