ಮಹಿಳೆ ಕುಟುಂಬ, ಸಮಾಜದ ಬೆನ್ನೆಲುಬು: ಪ್ರೊ.ಸಂತೋಷ ನಾಯ್ಕ ಅರ್

0
106

ಕಲಬುರಗಿ: ಮನೆಯ ಹಾಗೂ ಸಮಾಜದ ಬೆನ್ನೆಲುಬು ಆಗಿರುವ ಮಹಿಳೆ ಬಾಲ್ಯದಿಂದಲೇ ತಾರತಮ್ಯ ನೀತಿಗೆ ಒಳಗಾಗುತ್ತಿದ್ದಾಳೆ ಅವಕಾಶಗಳು ದೊರಕದಿದ್ದಾಗ ಕಿತ್ತುಕೊಳಳ್ಳಬೇಕು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸಂತೋಷ ನಾಯ್ಕ ಅರ್. ಕರೆ ನೀಡಿದರು.

ಅವರು ನಗರದ ಹೈ.ಕ.ಶಿ.ಸಂಸ್ಥೆಯ ವಿ.ಜಿ ಮಹಿಳಾ ಪದವಿ ಮಹಾವಿದ್ಯಾಲಯ ಸಮಾಜಶಾಸ್ತ್ರ ವಿಭಾಗದವರು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಶತಶತಮಾನಗಳಂದ ಹೆಣ್ಣು ತಾನು ಕೀಳು‌ ಎಂಬ ಭಾವನೆಯನ್ನು ಬೆಳೆಸಿಕೊಂಡು ದು ತನ್ನ ಮಾನಸಿಕ ದುಗುಡ ಹೊರ ಹಾಕಲು ಚಡಪಡಿಸುತಾಗಿದೆ ಎಂದು ನುಡಿದರು. ಸಮಾರಂಭದ‌ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿ ಚಿಕ್ಕಂದಿನಿಂದಲೆ ತಾರತಮ್ಯ ನೀತಿ ಪಾಲಿಸುವ ಪಾಲಕರು ತಮ್ಮ ಮನೋಭಾವ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು  ಕುಮಾರಿ.ಶಿಲ್ಪಾ ಪ್ರಾರ್ಥಸಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ ಗಂವ್ಹಾರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರೊ.ನೀಲಕಂಠ ಕಣ್ಣಿ.ಅತಿಥಿ ಯಾಗಿ ಭಾಗವಹಿಸಿದ್ದರು. ಡಾ.ಶಾಂತಾ ಮಠ ನಿರ್ವಹಿಸಿದರು ಕುಮಾರಿ ಪ್ರಗತಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಗೌರಾದೇವಿ ಕತ್ನಳ್ಳಿ,ಡಾ. ಶಕುಂತಲಾ ಪಾಟೀಲ,ಪ್ರೊ.ಕಲಾವತಿ ಡಿ. ಡಾ.ಶರಣಮ್ಮ ಕುಪ್ಪಿ, ಡಾ .ರೇಣುಕಾ ಪಾಟೀಲ, ಡಾ.ನಾಗರತ್ಮಾ ಪ್ರೊ ಉಷಾ ಪಾಟೀಲ, ಪ್ರೊ.ಕವಿತಾ ಠಾಕೂರ್ ಹಾಗೂ ಭೋದಕ,ಭೊಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here