ಸುರಪುರ: ಇಂದು ಮಕ್ಕಳು ಸುರಪುರ ಮತ್ತು ಶಹಾಪುರ ತಾಲೂಕಿನಾದ್ಯಂತ ಸಂಚರಿಸಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣದ ಕುರಿತು ಮತ್ತು ಪರಿಸರದ ಹಾಗು ದೇಶಪ್ರೇಮ ಜಾಗೃತಿ ಮೂಡಿಸಲು ಹೋಗುತ್ತಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ಮಾತನಾಡಿದರು.
ಕಬಾಡಗೇರಾದ ನಿಷ್ಠೀ ಕಡ್ಲೆಪ್ಪನವರ ಮಠದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ಹಮ್ಮಿಕೊಳ್ಳಲಾದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ,ಮಕ್ಕಳು ಕೇವಲ ಪಾಠ ಕಲಿಯಲು ಸೀಮಿತವಾಗದೆ ಇತರೆ ಮಕ್ಕಳಲ್ಲಿಯೂ ಶಿಕ್ಷಣ ಮತ್ತು ಪರಿಸರದ ಬ್ಗಗೆ ಅರಿವು ಮೂಡಿಸಲು ಸುರಪುರ ಶಹಾಪುರ ತಾಲೂಕಿನ ಹಳ್ಳಿಗಳಿಗೆ ಸೈಕಲ್ ಮೂಲಕ ಹೋಗಿ ಜಾಗೃತಿ ಮೂಡಿಸುವ ಕೆಲಸ ಎಲ್ಲರಿಗೂ ಮಾದರಿಯಾಗಿದೆ.ಮಕ್ಕಳ ಈ ಪರಿಸರ ಮತ್ತು ದೇಶಪ್ರೇಮವನ್ನು ಕಂಡು ಅಂತೋಷವಾಗುತ್ತದೆ,ಇದರಂತೆ ನೀವು ಜಾಥಾದಲ್ಲಿ ಅರಿವು ಮೂಡಿಸುವ ಎಲ್ಲಾ ಮಕ್ಕಳು ನಿಮ್ಮಂತೆ ದೇಶಪ್ರೇಮಿಗಳಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ರಾಜಶೇಖರ ದೇಸಾಯಿ,ಅಜೀಂ ಪ್ರೇಮಜಿ ಪೌಂಡೆಶನ್ ಸಂಪನ್ಮೂಲಾಧಿಕಾರಿ ಅನ್ವರ್ ಜಮಾದಾರ,ಚಂದ್ರಕಾಂತ ಕಳ್ಳಿಮನಿ,ಶರಣ ಬಸವ ಯಾಳವಾರ,ರಾಮು ಲಕ್ಷ್ಮೀಪುರ ಹಾಗು ಜಾಥಾ ಹೊರಟ ವಿದ್ಯಾರ್ಥಿಗಳಾದ ಶ್ರೀನಿವಾಸ, ಸಾಯಿಕಿರಣ, ಭೀಮಾಶಂಕರ, ಭೀಮಣ್ಣ, ಅಮರನಾಥ, ಪರಮಣ್ಣ, ಮಲ್ಲಿಕಾರ್ಜುನ,ಪರಶುರಾಮ,ಯೋಗೆಶ್,ಶ್ರೀಶೈಲ್,ನಿಂಗಪ್ಪಗೌಡ ಇತರರಿದ್ದರು.