ಆರು ಜನ ಸಾಧಕರು ‘ಅವ್ವ’ ಪ್ರಶಸ್ತಿಗೆ ಆಯ್ಕೆ

2
876

ಕಲಬುರಗಿ: ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ನಾಲ್ಕನೇ ವರ್ಷದ  2019 ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಕೋಲಾರದ ಎನ್.ಗುರುಮೂರ್ತಿಯವರ ‘ಅರ್ಜಿ ಹಾಕಿ ಹುಟ್ಟಿದವರ ನಡುವೆ'(ಕವನಸಂಕಲನ) ಗೋಕಾಕದ  ಶ್ರೀಮತಿ ಶಕುಂತಲಾ ಹಿರೇಮಠ ರವರ ‘ರೆಕ್ಕೆ ಬಲಿತ ಹಕ್ಕಿ’ (ಕಥಾಸಂಕಲನ) ಹುಮನಾಬಾದಿನ ಡಾ. ಜಯದೇವಿ ಗಾಯಕವಾಡ್ ರವರ ‘ಹಾಯಿಕುಗಳು’ ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅದೇ ರೀತಿಯಾಗಿ ಡಾ. ಎಸ್. ಎಸ್. ಗುಬ್ಬಿ ವೈದ್ಯಕೀಯ ಸಾಹಿತ್ಯ, ಶ್ರೀ ಸುಬ್ಬರಾವ ಕುಲಕರ್ಣಿ ರವರ ರಂಗಭೂಮಿ ಮತ್ತು ಪ್ರೊ. ಶಂಕರಲಿಂಗ ಹೆಂಬಾಡಿಯವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ  2019 ನೇ ಸಾಲಿನ ‘ಅವ್ವ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 15ರಂದು ಅನ್ನಪೂರ್ಣ ಕ್ರಾಸ್ ಹತ್ತಿರ  ಇರುವ ‘ಕಲಾಮಂಡಳ’ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಪ್ರತಿಷ್ಠಾನದ ಸಂಚಾಲಕರಾದ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.

Contact Your\'s Advertisement; 9902492681

2 ಕಾಮೆಂಟ್ಗಳನ್ನು

  1. ಪುರುಷರಿಗೆ ಮಹಿಳಾ ಪ್ರಶಸ್ತಿ ಸರಿಯಲ್ಲ.

    ‘ಅವ್ವ ‘ ಪ್ರಶಸ್ತಿಗೆ ಪುರುಷರನ್ನು ಯಾಕೆ ಆಯ್ಕೆ ಮಾಡುತ್ತಿರಿ ? ಅವರಿಗೂ ಒಂದು ‘ಅಪ್ಪ ‘ ಪ್ರಶಸ್ತಿ ಕೊಡಿ.
    ಅಥವಾ ಅವರನ್ನು ‘ಅವ್ವ’ ಪ್ರಶಸ್ತಿಯಿಂದ ಕೈ ಬಿಡಿ.ಈ ರೀತಿ ಪುರುಷರಿಗೆ ಸ್ತ್ರೀ ಲಿಂಗ ಸೂಚಿಸುವ ಅವ್ವ ಪ್ರಶಸ್ತಿ ಸರಿಯಲ್ಲ.
    ಇದು ನನ್ನ ಅಭಿಪ್ರಾಯ ಅಷ್ಟೇ.

    – ಮಚ್ಚೇಂದ್ರ ಪಿ ಅಣಕಲ್.
    ಕಲಬುರಗಿ

  2. ಇತ್ತಿಚಿನ ದಿನಗಳಲ್ಲಿ ಇಂತಹ ಅರ್ಥವಿಲ್ಲದ ಪ್ರಶಸ್ತಿಗಳು ಸಾಕಷ್ಟು ಹುಟ್ಟಿಕೊಳ್ಳುತ್ತಿವೆ. ಪ್ರಶಸ್ತಿ ಕೊಡುವವರಿಗೆ ನಾನು ಕೊಟ್ಟೆನೆಂಬುದು ಒಂದೆಡೆಯಾದರೆ ಪ್ರಶಸ್ತಿ ಪಡೆಯುವವರೆಗೆ ನಾನು ಪ್ರಶಸ್ತಿ ಪಡೆದೆನೆಂಬ ಉತ್ತುಂಗದ ಭಾವ.ಇರಲಿ ಈ ಪ್ರಶಸ್ತಿ ಗಳೆಲ್ಲ ಯಾಕೆ ? ಯಾವ ಪುರುಷರ್ಥಕ್ಕಾಗಿ ಹುಟ್ಟಿ ಕೊಳ್ಳುತ್ತಿವೆ ಈ ಪ್ರಶಸ್ತಿ ಬಾವಲಿಗಳು ? ಯಾವ ಪ್ರಶಸ್ತಿ ಯಾರಿಗೆ ಕೊಡಬೇಕು ಅನ್ನೋ ಪರಿಜ್ಞಾನ ಇಲ್ಲದವರು ಏನೇನೋ ಕೊಡತ್ತಿದ್ದಾರೆ. ಮೊನ್ನೆ 15 ಹಿಂದೆ ನಿವೃತ್ತರಾದವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿರುವುದು ಕಂಡು ಬಂದಿದೆ. ಇನ್ನೂ ಕೆಲವು ಮಠಾಧೀಶರು ತಮ್ಮ ಹುಟ್ಟು ಹಬ್ಬದಲ್ಲಿ ರತ್ನಮಣಿಗಳ ಪ್ರಶಸ್ತಿ ನೀಡಿರುವುದು ಕಂಡು ಬಂದಿದೆ. ಹಾಗೆ ಕೆಲವರು ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಮನಸ್ಸಿಗೆ ಬಂದಾಂದ ಪ್ರಶಸ್ತಿ ಅಂತ ಘೋಷಣೆ ಮಾಡಿ ಕೊಡುತ್ತಿದ್ದಾರೆ. ಕೆಲವರು ಕಲ್ಯಾಣ ಕರ್ನಾಟಕ ರತ್ನ ಅಥವಾ ರಾಜ್ಯ ಪ್ರಶಸ್ತಿ ಗಳನ್ನೆ ತಮ್ಮಿಂದ ಕೊಡಬೇಕೆಂದು ಬಯಸುತ್ತಿದ್ದಾರೆ ಇದು ಅರ್ಥವಿಲ್ಲದು.
    ಇಲ್ಲಿ ಅವ್ವ ಪ್ರಶಸ್ತಿ ಮಹತ್ತ್ವದ ಅರಿವಿಲ್ಲದೆ ಪುರುಷರಿಗೂ ಕೊಡುತ್ತಿರುವುದು ಪುರುಷಧರ್ಮಕ್ಕೆ ಅವಮಾನ ಮಾಡಿದಂತೆ ಅಲ್ವಾ ? ನಿಮಗೆ ಅಪ್ಪನ ಮೇಲೆ ಪ್ರೀತಿ ಇದ್ದರೆ ಪುರುಷರಿಗೆ ಪ್ರತ್ಯೇಕ ವಾಗಿ ಅಪ್ಪ ಪ್ರಶಸ್ತಿ ಕೊಡಿ. ಇಲ್ಲ ಅವರನ್ನು ಪ್ರಶಸ್ತಿ ಯಿಂದ ಕೈ ಬಿಡಿ.
    ಇದು ಪುರುಷರಿಗೆ ಅರ್ಧನಾರೇಶ್ವರೆಂದು ಕಲ್ಪಸಿದಂತಾಗುತ್ತದೆ.ಅದಕ್ಕೆ ಪುರುಷರಿಗೆ ಪೌರುಷದ ಸಂಕೇತ ವಾದ ಅಪ್ಪ ಪ್ರಶಸ್ತಿ ಕೊಡಿ.
    ಇಲ್ಲವಾದರೆ ಈ ಪ್ರಶಸ್ತಿ ಯ ಅವಶ್ಯಕತೆ ಯಾದರು ಏನಿದೆ ?

    ಮಚ್ಚೇಂದ್ರ ಪಿ ಅಣಕಲ್.
    ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here