ಮಕ್ಕಳು ದೇಶದ ಆಸ್ತಿ: ಶಾಸಕ ಬಸವರಾಜ ಮತ್ತಿಮಡು

0
41

ಶಹಾಬಾದ: ಇಂದಿನ ಮಕ್ಕಳೇ ನಾಡಿನ ಪ್ರಜೆಗಳು. ಮಕ್ಕಳು ದೇಶದ ಆಸ್ತಿಯಾಗಿದ್ದು ಸತತ ಪರಿಶ್ರಮ ಪಟ್ಟು ಅಭ್ಯಾಸ ಮಾಡಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ನಗರದ ಶಾಸಕರ ಅನುದಾನಿತ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಮತ್ತಿಮಡು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ೪೦ನೇ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಶಾಸಕರು ಮಕ್ಕಳೊಂದಿಗೆ ಕೇಕ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು.

Contact Your\'s Advertisement; 9902492681

ಯಾವಾಗಲೂ ಹುಟ್ಟುಹಬ್ಬವನ್ನು ಅನಾಥ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿದ್ದೆ. ಮಕ್ಕಳು ದೇವರ ಸಮಾನ. ಈಬಾರಿ ನನ್ನ ಅಭಿಮಾನಿ ಬಳಗದವರು ಸರಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಳ್ಳಲು ಅವಕಾಶ ಒದಗಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅಲ್ಲದೇ ಇಲ್ಲಿನ ಮಕ್ಕಳಿಗೆ ನೋಟ್‌ಬುಕ್, ಬ್ಯಾಗ್, ಪೆನ್ನು ನೀಡುತ್ತಿದ್ದು, ಮಕ್ಕಳು ಉತ್ತಮ ಅಭ್ಯಾಸ ಮಾಡಿ ಮುಂಬರುವ ಪರೀಕ್ಷೇಯಲ್ಲಿ ಉತ್ತಿರ್ಣರಾಗಬೇಕೆಂದು ಸಲಹೆ ನೀಡಿದರು.

ನಗರ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸುಭಾಷ ಜಾಪೂರ, ಉದ್ಯಮಿ ನರೇಂದ್ರವರ್ಮಾ,ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ, ನಗರಸಭೆ ಸದಸ್ಯರಾದ ಬೀಮಣ್ಣ ಖಂಡ್ರೆ, ರವಿ ರಾಠೋಡ, ಚಂದ್ರಕಾಂತ ಗೊಬ್ಬೂರಕರ್, ಸದಾನಂದ ಕುಂಬಾರ, ಶರಣು ವಸ್ತ್ರದ್, ಅಣೆಪ್ಪಾ ದಸ್ತಾಪೂರ, ವೀರೇಶ ಬಂದಳ್ಳಿ, ಗಿರಿರಾಜ ಪವಾರ, ಶ್ರೀಧರ್ ಜೋಶಿ, ದತ್ತಾ ಫಂಡ, ಭೀಮಯ್ಯ ಗುತ್ತೇದಾರ,ಕನಕಪ್ಪ ದಂಡಗೂಲಕರ,ಅಮರ ಕೋರೆ,ಸಿದ್ರಾಮ ಕುಸಾಳೆ,ಶಣು ಕವಲಗಿ,ಸೇರಿದಂತೆ ಶಾಲೆಯ ಶಿಕ್ಷಕರು ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here