ಶಾಸಕ ಬಸವರಾಜ ಮತ್ತಿಮಡು ಅವರಿಂದ ವಿಕಲಚೇತನರಿಗೆ ತ್ರಿಚಕ್ರವಾಹನ ವಿತರಣೆ

0
67

ಶಹಾಬಾದ: ನಗರಸಭೆಯ ಆವರಣದಲ್ಲಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾದ ಅರ್ಹ ವಿಕಲಚೇತನರಿಗೆ ತ್ರಿಚಕ್ರವಾಹನವನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವಿತರಿಸಿದರು.

ತ್ರಿಚಕ್ರ ವಾಹನ ಕೀ ಹಸ್ತಾಂತರಿಸಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು,ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬಂದು ನೆಮ್ಮದಿಯ ಜೀವನ ನಡೆಸಬೇಕು.ಅದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ನಗರಸಭೆಯಿಂದ ವಿತರಿಸಲಾಗುತ್ತಿರುವ ತ್ರಿಚಕ್ರವಾಹನವನ್ನು ಬಳಸಿಕೊಂಡು ಉತ್ತಮ ಜೀವನ ನಿರ್ವಹಣೆ ಮಾಡಬೇಕೆಂದು ಹೇಳಿದರು.

Contact Your\'s Advertisement; 9902492681

ನಗರಸಭೆಯ ಪೌರಾಯುಕ್ತ ವೆಂಕಟೇಶ ಮಾತನಾಡಿ, ವಿಕಲಚೇತನರಿಗೆ ನಗರಸಭೆಯ ೨೦೧೭-೧೮ ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ೯ ತ್ರಿಚಕ್ರ ವಾಹನವನ್ನು ವಿತರಿಸಲಾಗಿದೆ. ಈ ವಾಹನಗಳನ್ನು ಬಳಸಿಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರತ್ನಿಸುವಂತಾಗಬೇಕು ಎಂದು ಹೇಳಿದರು.

ನಗರ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಉದ್ಯಮಿ ನರೇಂದ್ರವರ್ಮಾ, ನಾಗರಾಜ ಮೇಲಗಿರಿ, ನಗರಸಭೆ ಸದಸ್ಯರಾದ ರವಿ ರಾಠೋಡ, ಬೀಮಣ್ಣ ಖಂಡ್ರೆ, ಡಾ.ಅಹ್ಮದ್ ಪಟೇಲ,ಮಲ್ಲಿಕಾರ್ಜುನ ವಾಲಿ, ಪಾರ್ವತಿ ಪವಾರ, ನಿಂಗಣ್ಣ ಹುಳಗೋಳಕರ್, ವೀರೇಶ ಬಂದಳ್ಳಿ, ಗಿರಿರಾಜ ಪವಾರ, ಶ್ರೀಧರ್ ಜೋಶಿ, ದತ್ತಾ ಫಂಡ, ಭೀಮಯ್ಯ ಗುತ್ತೇದಾರ,ಕನಕಪ್ಪ ದಂಡಗುಲಕರ,ಅಮರ ಕೋರೆ,ಸಿದ್ರಾಮ ಕುಸಾಳೆ, ಜ್ಯೋತಿ ಶರ್ಮಾ,ಸ್ನೇಹಲ್ ಜಾಯಿ, ಸಾಬಣ್ಣ ಸುಂಗಲಕರ್ ಸೇರಿದಂತೆ ನಗರಸಭೆಯ ಸಿಬ್ಬಂದಿವರ್ಗದವರು ಇದ್ದರು.

ವಿರೋಧ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರ ಹಸ್ತದಿಂದ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮವನ್ನು ಮಂಗಳವಾರ ನಿಗದಿಪಡಿಸಲಾಗಿತ್ತು.ಆದರೆ ನಗರಸಭೆಯ ಸದಸ್ಯರಿಗೆ ಯಾವುದೇ ಮಾಹಿತಿ ನಗರಸಭೆಯ ಅಧಿಕಾರಿಗಳು ನೀಡದಿರುವುದಕ್ಕೆ ಸುಮಾರು ೨೧ ಸದಸ್ಯರು ಕಾರ್ಯಕ್ರಮವನ್ನು ರದ್ದು ಪಡಿಸಿ ಮುಂದೂಡಿ ಎಂದು ಪೌರಾಯುಕ್ತರಿಗೆ ಆಗ್ರಹಿಸಿದರು.ಪೌರಾಯುಕ್ತರು ಹಠಾತನೇ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಎಲ್ಲರಿಗೂ ಮಾಹಿತಿ ನೀಡಲು ಆಗಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೆವೆ ಎಂದು ಹೇಳಿದರೂ, ಸದಸ್ಯರು ಮಾತ್ರ ನಿಮ್ಮ ಬೇಜವ್ದಾರಿತನ ಈ ರೀತಿಯಾಗಿದೆ.ಅಲ್ಲದೇ ಸಮಾರಂಭವನ್ನು ಆಯೋಜನೆ ಮಾಡಿದರೂ ಟೆಂಟ್ ವ್ಯವಸ್ಥೆಯೂ ಮಾಡಿಲ್ಲ. ಸುಮ್ಮನೇ ಬೇಕಾಬಿಟ್ಟಿಯಾಗಿ ಕಾರ್ಯಕ್ರಮ ಮಾಡಿದರೇ ಹೇಗೆ ? ಎಂದು ಪ್ರಶ್ನಿಸಿದರು.ಅದಕ್ಕೆ ಪೌರಾಯುಕ್ತರು ಹಾಗೂ ಸ್ಥಳೀಯ ಮುಖಂಡರು ಸೇರಿಕೊಂಡು ಸದಸ್ಯರನ್ನು ಮನವೊಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here