ಕಲಬುರಗಿ: ರಾಜ್ಯ ಸರಕಾರ ಈ ಸಲದ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371 (J) ತಿರಸ್ಕರಿಸುವ ಮೂಲಕ ಅನ್ಯಾಯವೆಸಲಾಗಿತ್ತು. ಮತ್ತೆ ಈಗ ಬಜೆಟ್ ನಲ್ಲಿಯೂ ಕಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರಕಾರದಿಂದ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಈಗ ಎಲ್ಲಿದ್ದಾರೆ ಎಂದು ಸಮಾಜಿಕ ಜಾಲಾತಾಣದಲ್ಲಿ ಕುಟುಕಿದ್ದಾರೆ.