ವಿಶ್ವ ಮಹಿಳಾ ದಿನದ ಪ್ರಯುಕ್ತ: ಶರಣಬಸವ ವಿವಿ : ವಿದ್ಯಾರ್ಥಿನಿಯರಿಂದ ವಾಕ್‌ಥಾನ್

0
70

ಕಲಬುರಗಿ: ದೇವಸ್ಥಾನದ ಗಂಟೆಯ ನಾದ ಒಂದೆಡೆ, ಅಮ್ಮನ(ತಾಯಿ)ಯ ಕುರಿತು ಹಾಡುಗಳ ಧ್ವನಿವರ್ಧಕಗಳ ಶಬ್ದ ಮತ್ತೊಂದೆಡೆ, ಶ್ವೇತವರ್ಣದಲ್ಲಿ ಶ್ವೇತ ಚೆಲುವೆಯರ ಕುಲುಕುಲು ನಗು, ಪಿಸು ಮಾತುಗಳು, ಗುಂಪು ಗುಂಪಾಗಿ ನಿಂತು ಮಾತಾಡುವವರಲ್ಲಿ ಏನೋ ಒಂದು ಸಾರ್ಥಕತೆಯ ಭಾವ ಕಂಗೊಳಿಸುತ್ತಿತ್ತು. ಅಲ್ಲಿ ನೆರೆದವರ ಕಣ್ಗಳಲ್ಲಿ, ಈ ಭಾವ ಸಂಗಮ ಕಂಡು ದೇವಸ್ಥಾನಕ್ಕೆ ಬಂದ ಭಕ್ತರು ಏನೀದು? ಎಂಬ ಪ್ರಶ್ನಾರ್ಥಕ ಮಾತು ಅಲ್ಲಲ್ಲಿ.

ನಗರದ ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಗುರುವಾರ ಕಂಡುಬಂದ ದೃಶ್ಯವಿದು. ವಿಶ್ವ ಮಹಿಳಾ ದಿನದ ಪ್ರಯುಕ್ತ ವಾಕ್‌ಥಾನ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವ ಹಾಗೂ ಚಿ.ದೊಡ್ಡಪ್ಪ ಅಪ್ಪಾಜೀ ಚಾಲನೆ ನೀಡಿದರು. ಶರಣಬಸವೇಶ್ವರ ದೇವಸ್ಥಾನದಿಂದ ಶರಣಬಸವ ವಿಶ್ವವಿದ್ಯಾಲಯದವರೆಗೆ ಕಾಲ್ನಡಿಗೆ (ವಾಕ್‌ಥಾನ್) ಜಾಥಾದಲ್ಲಿ ಹೆಣ್ಣಿನ ಮಹತ್ವ ಹಾಗೂ ಶೋಷಣೆ ಕುರಿತು ಎಂಜನೀಯರಿಂಗ್, ಬಿಬಿಎಂ, ಬಿಸಿಎ ಹಾಗೂ ಎಂಸಿಎ ಇತರ ವಿಭಾಗದ ವಿದ್ಯಾರ್ಥಿನಿಯರು ನಾಟಕ, ನೃತ್ಯ ಪ್ರದರ್ಶಿಸಿದರು.

Contact Your\'s Advertisement; 9902492681

ಹೆಣ್ಣು ಪ್ರಪಂಚದ ಧ್ವನಿ, ವೈಜ್ಞಾನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ, ಹೆಣ್ಣು ಅಬಲೆ ಅಲ್ಲ ಸಬಲೆ, ಹೆಣ್ಣು ಸಂಸ್ಕೃತಿ ನಿರ್ಮಾಪಕಳು, ಹೆಣ್ಣು ಸಮಾಜದ ಕಣ್ಣು, ಕಲಿತ ಹೆಣ್ಣು ಮನೆಗೆ ಆಧಾರ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಇತ್ಯಾದಿ ಉದ್ಘೋಷಣೆ ಕೂಗುವ ಮೂಲಕ ಜನ ಜಾಗೃತಿಗೊಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮಕುಲಪತಿ ಡಾ.ವಿ.ಡಿ ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಡಾ. ಲಕ್ಷ್ಮಿ ಮಾಕಾ ಹಾಗೂ ಎಲ್ಲಾ ಮಹಿಳಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಬಿಳಿ ಬಟ್ಟೆ ಧರಿಸಿ ಭಾಗವಹಿಸಿದ್ದರು. ಪ್ರೊ. ಆಶಾರಾಣಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

????????????????????????????????????
????????????????????????????????????

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here