ಸಮತೋಲಿತ ಬಜೆಟ್: ಹರ್ಷಾನಂದ ಗುತ್ತೇದಾರ

0
150

ಆಳಂದ: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ೨೦೨೦-೨೧ನೇ ಸಾಲಿನ ಆಯವ್ಯಯ ಸಮತೋಲಿನತೆಯಿಂದ ಕೂಡಿದೆ ಎಂದು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯ ಆವರ್ತ ನಿಧಿ ೨ಸಾವಿರ ಕೋಟಿಗೆ ಹೆಚ್ಚಳ, ಹೊಸದಾಗಿ ೧೦ ಅಗ್ನಿಶಾಮಕ ದಳ ಸ್ಥಾಪನೆ, ಬೆಳೆ ವಿಮೆಗೆ ೯೦೦ ಕೋಟಿ, ಸಾವಯವ ಕೃಷಿಗೆ ೨೦೦ ಕೋಟಿ, ಲಂಬಾಣಿ ಭಾಷಾ ಅಭಿವೃದ್ಧಿ ಅಕಾಡೆಮೆಗೆ ೫೦ ಲಕ್ಷ, ಸಬ್ ಅರ್ಬನ್ ರೈಲು ಯೋಜನೆಗೆ ೫೦೦ ಕೋಟಿ, ಮಳೆ ನೀರು ಕೊಯ್ಲಿಗಾಗಿ ಜಲಾಮೃತ ಯೋಜನೆ, ಟೋಮ್ಯಾಟೋ, ಈರುಳ್ಳಿ, ದಾಳಿಂಬೆ ರಫ್ತಿಗೆ ರೈಲು ಸೌಲಭ್ಯ, ರಾಜ್ಯ ಸರ್ಕಾರಿ ನೌಕರರ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಬದಲಾವಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ೫೦೦ ಕೋಟಿ, ಸಾರಿಗೆ ಸಂಸ್ಥೆಗೆ ೨೪೦೦ ಹೊಸ ಬಸ್ ಖರೀದಿ, ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ೩೨.೩೫೯ ಕೋಟಿ, ರೈತರ ಮನೆ ಬಾಗಿಲಿಗೆ ಕೀಟನಾಶಕ ವಿತರಣೆ, ರಾಯಚೂರು- ಕಲಬುರಗಿ-ಯಾದಗೀರಿ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಜಲಾಶಯ ನಿರ್ಮಾಣ, ಎಲ್ಲ ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೇಡಿಟ್ ಕಾರ್ಡ ಸೌಲಭ್ಯ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಂಡಳಿಗೆ ೧೫೦೦ ಕೋಟಿ, ನೇಕಾರರ ಸಾಲ ಮನ್ನಾ ಯೋಜನೆಗೆ ೭೯.೫೭ ಕೋಟಿ, ಭಾಗ್ಯಲಕ್ಷ್ಮೀ ಮತ್ತು ಬೈಸಿಕಲ್ ಯೋಜನೆ, ಅತೀ ಸಣ್ಣ ರೈತರಿಗೆ ನೀಡುವ ೧೦ ಸಾವಿರ ಸಹಾಯಧನ ಮುಂದುವರಿಕೆ, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ೧ ಸಾವಿರ ಕೋಟಿ, ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷ ವಿದ್ಯಾರ್ಥಿ ವೇತನ, ೨೭೮ ಪಬ್ಲಿಕ್ ಶಾಲೆಗಳ ಆರಂಭ, ಕಿಸಾನ ಸಮ್ಮಾನ ಯೋಜನೆಗೆ ೨೬೦೦ ಕೋಟಿ, ಎತ್ತನಹೊಳೆ ನೀರಾವರಿ ಯೋಜನೆಗೆ ೫೦೦ ಕೋಟಿ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಒಂದು ಲಕ್ಷ ಮಹಿಳೆಯರಿಗೆ ಉಚಿತ ಬಿಎಂಟಿಸಿ ಪಾಸ್, ಎಸ್‌ಎಸ್‌ಎಲ್‌ಸಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ನಗದು ಬಹುಮಾನ ಸೇರಿದಂತೆ ಅನೇಕ ಸುಧಾರಣ ಕ್ರಮಗಳನ್ನು ಈ ಬಜೆಟ್ ಒಳಗೊಂಡಿದೆ.

Contact Your\'s Advertisement; 9902492681

ಜನರ ನೀರಿಕ್ಷೆಗೆ ತಕ್ಕಂತೆ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸರ್ವ ರೀತಿಯಿಂದ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here