ಸರ್ವರನ್ನು ಒಳಗೊಂಡ ಬಜೆಟ್ ಶಾಸಕ ಗುತ್ತೇದಾರ ಬಣ್ಣನೆ

0
487

ಆಳಂದ: ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ೨೦೨೦-೨೧ನೇ ಸಾಲಿನ ಬಜೆಟ್ ಸರ್ವರನ್ನು ಒಳಗೊಂಡಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಣ್ಣಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಂಡಳಿಗೆ ೧೫೦೦ ಕೋಟಿ, ನೇಕಾರರ ಸಾಲ ಮನ್ನಾ ಯೋಜನೆಗೆ ೭೯.೫೭ ಕೋಟಿ, ಭಾಗ್ಯಲಕ್ಷ್ಮೀ ಮತ್ತು ಬೈಸಿಕಲ್ ಯೋಜನೆ, ಅತೀ ಸಣ್ಣ ರೈತರಿಗೆ ನೀಡುವ ೧೦ ಸಾವಿರ ಸಹಾಯಧನ ಮುಂದುವರಿಕೆ, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ೧ ಸಾವಿರ ಕೋಟಿ, ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷ ವಿದ್ಯಾರ್ಥಿ ವೇತನ, ೨೭೮ ಪಬ್ಲಿಕ್ ಶಾಲೆಗಳ ಆರಂಭ, ಕಿಸಾನ ಸಮ್ಮಾನ ಯೋಜನೆಗೆ ೨೬೦೦ ಕೋಟಿ, ಎತ್ತನಹೊಳೆ ನೀರಾವರಿ ಯೋಜನೆಗೆ ೫೦೦ ಕೋಟಿ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಒಂದು ಲಕ್ಷ ಮಹಿಳೆಯರಿಗೆ ಉಚಿತ ಬಿಎಂಟಿಸಿ ಪಾಸ್, ಎಸ್‌ಎಸ್‌ಎಲ್‌ಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ನಗದು ಬಹುಮಾನ, ಎಸ್‌ಸಿ, ಎಸ್‌ಟಿ ಯುವಕರಿಗೆ ಉಚಿತ ಉದ್ಯೋಗ ತರಬೇತಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ೨೫ ಕೋಟಿ ಮೀಸಲು, ಕ್ರೈಸ್ತ ಸಮುದಾಯಕ್ಕೆ ೨೫ ಕೋಟಿ ಮೀಸಲು, ಹನಿ ನೀರಾವರಿಗೆ ಶೇ. ೯೦% ಸಹಾಯಧನ, ೧೦ ಲಕ್ಷ ಮನೆಗಳಿಗೆ ಗಂಗೆ ನೀರು ಯೋಜನೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ  ಅಭಿನಂದಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here