ಕಲಬುರಗಿ: ವನ್ಯಜೀವಿಗಳ ಹತ್ಯೆ, ಭೂಮಿ, ಪರಿಸರ ಮಾಲಿನ್ಯ ಮಾಡುವುದನ್ನು ನಿಲ್ಲಿಸಿ ಸಂರಕ್ಚಣೆಯ ನಿರ್ವಹಣೆ ಮಾಡಬೇಕು ಎಂದು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಹುಮನಾಬಾದನ ಜೀವಶಾಸ್ತ್ರ ಉಪನ್ಯಾಸಕರಾದ ಡಾ.ಶ್ರವಣಕುಮಾರ ಟೊಂಪೆ ಕರೆ ನೀಡಿದರು.
ನಗರದ ಹೈ.ಕ.ಶಿ.ಸಂಸ್ಥೆಯ ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ವಿಶ್ವ ವನ್ಯಜೀವಿ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಂದುವರದು ಮಾತನಾಡಿದ ಅವರು ವನ್ಯಜೀವಿಗಳಿಗೆ ಮಾನವನಿಂದ ಬಂದೆರಗುತ್ತಿರುವ ಆಪತ್ತಿನಂದಾಗಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಅಸಡ್ಯ ಮನೋಭಾವ ತೊರುತ್ತಿರುವದರಿಂದ ಇಂದು ಇಡಿ ಮನುಕುಲವೆ ತತ್ತರಿಸುವಂತಾಗಿದೆ. (ಕರೋನಾ ವೈರಸ್ ಸ್ರಷ್ಟಿಸಿರುವ ಭಯಾನಕತೆ) ಎಂದು ಹೇಳಿ ವನ್ಯಜೀವಿಗಳ ಸಂರಕ್ಚಣೆ ನಮ್ಮೆಲ್ಲರ ಹೊಣೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಡಾ.ಕಾವ್ಯ ಸರಾಫ ಚಿಟ್ಟೆಗಳ ಜೀವ ವೈವಿಧ್ಯತೆಯ ಸಾಕ್ಚಾ ಚಿತ್ರದ ಮೂಲಕ ವಿಧ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು. ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷ ತೆ ವಹಿಸಿದ್ದರು. ಕುಮಾರಿ ಕೀರ್ತಿ ಪ್ರಾರ್ಥಸಿದರು ,ಕುಮಾರಿ ಸ್ಪೂರ್ತಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಮಹಾನಂದಾ ಕೊರವಾರ ನಿರ್ವಹಿಸಿದರು.ಕು.ಮೋಕ್ಷಾ ವಂದಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಲಾ ಪಾಟೀಲ, ಪ್ರಾಧ್ಯಾಪಕರಾದ ಡಾ.ಫರಜಾನಾ ಜಬಿನ್ ,ಡಾ ನೀಲಕಂಠ ವಾಲಿ, ಡಾ.ಮಹೇಶ ಗಂವ್ಹಾರ ಉಪಸ್ತಿತರಿದ್ದರು.