ಅಂಗನವಾಡಿ ಕೇಂದ್ರಗಳಲ್ಲಿನ ದವಸ ಧಾನ್ಯ ಕಾಳಸಂತೆಯಲ್ಲಿ ಮಾರಾಟ: ರಾಜು ಕಟ್ಟಿಮನಿ

0
483

ಸುರಪುರ: ತಾಲೂಕಿನಾದ್ಯಂತ ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಗರ್ಭೀಣಿ ಸ್ತ್ರೀಯರಿಗೆ ಸರಿಯಾದ ಪೌಷ್ಠಿಕ ಆಹಾರವನ್ನು ವಿತರಣೆ ಮಾಡದೆ,ಬಂದ ಧವಸ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಂಬೇಡ್ಕರ ಸೇನೆ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ ಆರೋಪಿಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭೀವೃಧ್ಧಿ ಇಲಾಖೆ ಅಧಿಕಾರಿ ಲಾಲಸಾಬ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ,ತಾಲೂಕಿನ ಯಾಳಗಿ ಮತ್ತು ಗುತ್ತಿ ಬಸವೇಶ್ವರ ಸೇರಿದಂತೆ ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಅಕ್ರಮ ದಂಧೆ ಯಥೇಚ್ಛವಾಗಿ ನಡೆದಿದೆ,ಸರಕಾರ ಮಕ್ಕಳು ಮತ್ತು ಗರ್ಭೀಣಿ ಸ್ತ್ರೀಯರಿಗೆಂದು ನೀಡುವ ವಸ್ತುಗಳನ್ನು ಕಾಟಾಚಾರಕ್ಕೆ ಮೊದಲ ಒಂದು ವಾರ ನೀಡಿದಂತೆ ಮಾಡಿ,ನಂತರ ಬರುವ ಎಲ್ಲಾ ಪದಾರ್ಥ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ.

Contact Your\'s Advertisement; 9902492681

ಇದರಿಂದ ಅಪೌಷ್ಠೀಕತೆಯಿಂದ ಮಕ್ಕಳು ಮತ್ತು ಗರ್ಭೀಣಿಯರು ನಲಗುವಂತಾಗಿದೆ, ಆದ್ದರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಕಾರ್ಯಕರ್ತೆಯರ ಮೇಲೆ ಕ್ರಮ ಕೈಗೊಳ್ಳಬೇಕು.ಮತ್ತು ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಕೆಲಸಕ್ಕೆ ಬರದೆ ಸಹಾಯಕಿಯರ ಮೇಲೆಯೆ ಬಿಡುತ್ತಾರೆ.ಸರಕಾರದ ಸಂಬಳ ಪಡೆದು ಕೆಲಸಕ್ಕೆ ಬರದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೇನೆಯ ಪದಾಧಿಕಾರಿಗಳಾದ ರಮೀಜ್ ರಾಜಾ,ಆಸೀಫ್ ಹುಸೇನ,ಸಿರಾಜ್ ಉಸ್ತಾದ ಹುಸೇನ್,ಮಂಜುನಾಥ ದೊಡ್ಮನಿ,ಸಿದ್ದಪ್ಪ ಬೊಮ್ಮನಹಳ್ಳಿ,ಅಜೀಸ್ ಅಹ್ಮದ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here