ಕಲಬುರಗಿ: ನಗರದ ಉಪನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಕಾರ್ಯಚರಣೆ ನಡಸಿ, ಅಧಿಕಾರಿಯ ಕಾರಿನಲ್ಲಿ ನಗದಿ ಹಣ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಮಿನಿ ವಿಧಾನ ಸೌಧದಲ್ಲಿರುವ ನೋಂದಣಿಧಿಕಾರಿಗಳ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಹಾಗೂ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಿಢೀರ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ದಾಳಿ ನಡೆಸಿ, ನೋಂದಣಿ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಮೂಲಕ ಎಚ್ಚರಿಸಿದ್ದಾರೆ. ದಾಳಿಯಲ್ಲಿ ನೋಂದಣಿ ಇಲಾಖೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿಚಾರಣೆಗೆ ಒಳಪಡಿಸಲಾಯಿತು ಎಂದು ತಿಳಿದುಬಂದಿದೆ.
ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ ಅವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಉಪ ನೋಂದಣಿ ಅಧಿಕಾರಿ ಎ. ಹಸೀಬ್ ಅವರ ಕಾರಿನಲ್ಲಿ ರೂ. 50 ಸಾವಿರಕ್ಕೂ ಹೆಚ್ಚು ನಗದು ಪತ್ತೆ ಯಾಗಿದೆ ಎಂದು ಮಾಹಿತಿ ಇದ್ದು, ಕಚೇರಿಯಲ್ಲಿಯೂ ನಗದು ಹಣ ಪತ್ತೆಯಾಗಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದ್ದು, ಈ ಕುರಿತು ಎಸಿಬಿ ಅಧಿಕಾರಿಗಳು ವಿಚಾರಣೆ ಹಾಗೂ ತನಿಖೆಯ ನಂತರ ಅಧಿಕೃತ ಮಾಹಿತಿ ಹೊರ ಬೀಳಲಿದೆ.