ಶಹಾಬಾದ: ತಾಲೂಕಿನ ಭಂಕೂರ ಗ್ರಾಮದಲ್ಲ್ಲಿ ತಹಸೀಲ್ದಾರ ಸುರೇಶ ವರ್ಮಾ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಶನಿವಾರದಂದು ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ್,ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಈ ಬಾರಿ ನೀರಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಗ್ರಾಮದ ಕಾಗಿಣಿ ನದಿಗೆ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಲಾಗಿದೆ. ಆದರೆ ಮೇಲಾಧಿಕಾರಿಗಳ ನಿರ್ಲಕ್ಷ್ಯತನದಿಂದ ನೀರನ್ನು ವಾಡಿ ಸಿಮೆಂಟ ಕಂಪನಿಗೆ ಬಿಡಲಾಗುತ್ತಿದ್ದು ಇದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ಸಮಸ್ಯೆ ಆಗದಂತೆ ಬ್ಯಾರೇಜ್ ಗೇಟ್ ಹಾಕಿ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಮಾತನಾಡಿ, ಗ್ರಾಮದಲ್ಲಿ ವಿವಿಧ ಸಮಾಜದ ಜನರಿಗೆ ಹೂಳಲು ಸ್ಮಶಾನವಿಲ್ಲ.ಇದರಿಂದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈಗಿರುವ ಚಿಕ್ಕದಾದ ರುದ್ರಭೂಮಿಯಲ್ಲಿ ಹೂಳಲು ಹೋದರೆ ಎರಡಿರಿಂದ ಮೂರು ಶವಗಳ ಮೂಳೆ ತೆಗೆದು ಹೂಳಬಾಕಾದ ಸಂದರ್ಭ ಬಂದೊದಗಿದೆ.ಕೂಡಲೇ ಗ್ರಾಮಕ್ಕೆ ಸಾರ್ವಜನಿಕ ರುದ್ರಭೂಮಿ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ,ರುದ್ರಭೂಮಿಗಾಗಿ ಗ್ರಾಮದ ಯಾರಾದರೊಬ್ಬರು ಹೊಲ ನೀಡಲು ಮುಂದಾದರೆ ಅವರ ಹೊಲಕ್ಕೆ ಸರ್ಕಾರ ಸೂಕ್ತ ಬೆಲೆ ನೀಡಿ, ರುದ್ರಭೂಮಿಗೆ ಜಾಗ ನೀಡಲಾಗುವುದು. ಆದ್ದರಿಂದ ಯಾರಾದರೂ ಮಾರುವವರಿದ್ದರೇ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು.ಅಲ್ಲದೇ ಪಾಣಿ ತಿದ್ದುಪಡಿ, ವಿಧವಾ ವೇತನ, ವೃದ್ಯಾಪ ವೇತನ, ಅಂಗವಿಕಲರ ವೇತನ ಬಗ್ಗೆ ಜಾಗೃತಿ ಮೂಡಿಸಿದರು.ಯಾರಿಗಾದರೂ ಪಿಂಚಣಿ ಸೌಲಭ್ಯ ಆಗದಿದ್ದರೇ ಸೂಕ್ತ ದಾಖಲೇ ಸಲ್ಲಿಸಿದರೇ ತಕ್ಷಣವೇ ಪಿಂಚಣಿ ಸೌಕರ್ಯ ಮಾಡಿಕೊಡಲಾಗುವುದು. ಯಾವುದೇ ಸಮಸ್ಯೆ ಇದ್ದರೇ ಅದನ್ನು ಲಿಖಿತ ರೂಪದಲ್ಲಿ ನೀಡಿದರೇ ಆದಷ್ಟು ಬೇಗನೆ ಪರಿಹಾರ ಕಂಡುಕೊಳ್ಳಬಹುದು.ಆದ್ದರಿಂದ ಗ್ರಾಮಸ್ಥರು ಲಿಖಿತ ರೂಪದಲ್ಲಿ ಮನವಿ ಪತ್ರ ಸಲ್ಲಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ತಹಸೀಲ್ದಾರ ಸುರೇಶ ವರ್ಮಾರವರಿಂದ ಬಾಂಡ ವಿತರಿಸಲಾಯಿತು.
ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಇಲಾಖೆಯ ಮೇಲ್ಕಿಚಾರಕಿಯಾದ ನೇತ್ರಾವತಿ, ಈ ಸಂದರ್ಭದಲ್ಲಿ ಭಂಕೂರ ಗ್ರಾಪಂ ಅಧ್ಯಕ್ಷರು ವಿಜಯಲಕ್ಷ್ಮಿ ಎಸ್ ವಗ್ಗನ್, ಉಪತಹಸೀಲ್ದಾರ ಮಲ್ಲಿಕಾರ್ಜುನ ರೇಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ದಿಪ್ತಿ ಪಶುವೈದ್ಯಾಧಿಕಾರಿ, ಭಿಮರಾವ ಮಾಶಿ, ಸೈಯದ ಹಾಜಿ ಶೀರೆಸ್ತೆದಾರರು ಭಂಕೂರ, ವೇದಾಂಗ್ ತುಪ್ಪದ ಪಿಡಿಓ, ಆರ್‌ಐ ವೀರಭಧ್ರಪ್ಪಾ , ಇತರರು ಇದ್ದರು.