ಹೋಳಿ ಹಬ್ಬದಲ್ಲಿ ಅನುಚಿತವಾಗಿ ವರ್ತಿಸುವವರ ಮೇಲೆ ಕ್ರಮ ನಿಶ್ಚಿತ: ಪಿಐ ಪಾಟೀಲ

0
82

ಸುರಪುರ: ಈ ಹಿಂದಿನ ಎಲ್ಲಾ ದಾಖಲೆಗಳನ್ನು ನೋಡಿದಲ್ಲಿ ಸುರಪುರ ನಗರದಾದ್ಯಂತ ಎಲ್ಲಿಯೂ ಹೋಳಿ ಸಂದರ್ಭದಲ್ಲಿ ಗಲಾಟೆಗಳಾದ ಉದಾಹರಣೆಗಳಿಲ್ಲ. ಅದರಂತೆ ಈಬಾರಿಯು ಶಾಂತಿಯುತವಾಗಿ ಹೋಳಿ ಆಚರಿಸಿ,ಅನುಚಿತವಾಗಿ ವರ್ತಿಸುವವರ ಮೇಲೆ ಕ್ರಮ ನಿಶ್ಚಿತವಾಗಿ ಕೈಗೊಳ್ಳುವುದಾಗಿ ಆರಕ್ಷಕ ನಿರೀಕ್ಷಕ ಎಸ್.ಎಮ್.ಪಾಟೀಲ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಕುರಿತು ಆಚರಿಸಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈಗ ಪರೀಕ್ಷಾ ಸಮಯವಾದ್ದರಿಂದ ವಿದ್ಯಾರ್ಥಿಗಳ ಮೇಲೆ ಯಾವುದೆ ಕಾರಣಕ್ಕೂ ಬಣ್ಣ ಎರಚ ಬೇಡಿ.ಇಷ್ಟವಿಲ್ಲದವರಿಗೆ ಬಲವಂತದಿಂದ ಬಣ್ಣ ಹಾಕುವುದಾಗಲಿ,ಮುಖ್ಯ ರಸ್ತೆಗಳಲ್ಲಿ ನಿಂತು ಹೋಗು ಬರುವವರ ಬಳಿ ಹೋಳಿ ಹೆಸರಲ್ಲಿ ಹಣ ವಸೂಲಿ ಮಾಡುವುದು ಕಂಡುಬಂದರೆ ಅಂತವರ ಮೇಲೆ ೩೯೨ ಕಲಂ ಅಡಿ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಹೋಳಿಯ ದಿನದಂದು ಮದ್ಹ್ಯಾನ ೧ ಗಂಟೆಯ ವರೆಗೆ ಬಣ್ಣ ಹಾಡಿ,ಯಾವುದೆ ಕಾರಣಕ್ಕು ಗಲಾಟೆಗಳಿಗೆ ಆಸ್ಪದ ಕೊಡಬೇಡಿ,ಎಲ್ಲಾ ಧರ್ಮ ಮತ ಪಂಥದವರು ಒಂದೆಂಬ ಭಾವದಲ್ಲಿ ಕಂಡು ಪರಸ್ಪರ ಸಾಮರಸ್ಯದೊಂದಿಗೆ ಹಬ್ಬ ಆಚರಿಸುವಂತೆ ತಿಳಿಸಿದರು.ಇನ್ನು ಬಣ್ಣ ಎರಚುವ ಸಂದರ್ಭದಲ್ಲಿ ಯಾವುದೆ ಕಾರಣಕ್ಕೂ ಮೊಟ್ಟೆ ಹೊಡೆಯುವುದಾಗಲಿ,ಸುಟ್ಟ ಆಯಿಲ್ ಹಾಕುವುದಾಗಲಿ ಮಾಡಬೇಡಿ ಎಂದು ತಿಳಿಸಿದರು.

Contact Your\'s Advertisement; 9902492681

ಇದಕ್ಕು ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಜನ ಮುಖಂಡರು ಮಾತನಾಡಿ, ಸುರಪುರ ನೆಲದಲ್ಲಿ ರಾಮ ರಹಿಮರು ಒಂದೆ ಎಂದು ಇಲ್ಲಿ ಬಾಳಿತ್ತಿದ್ದೆವೆ.ಎಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಶಾಂತಿಯಿಂದ ಆಚರಿಸುತ್ತೆವೆ.ಯಾವುದೆ ಏರಿಯಾ ಅಥವಾ ಗ್ರಾಮಗಳಲ್ಲಿ ಕಿಡಿಗೇಡಿಗಳು ಯಾವುದಾದರು ಅನುಚಿತ ವರ್ತನೆ ಮಾಡುತ್ತಿದ್ದರೆ ನಾವೆ ಬುದ್ಧಿ ಹೇಳುವ ಮೂಲಕ ಮೈಮೇಲೆ ಬಟ್ಟೆ ಇಲ್ಲದಿದ್ದರು ಪೊಲೀಸರಂತೆ ಕೆಲಸ ಮಾಡುವುದಾಗಿ ಮಾತನಾಡಿದರು.ಉಸ್ತಾದ ವಜಾಹತ್ ಹುಸೇನ,ವೆಂಕೋಬ ದೊರೆ,ರಾಹುಲ್ ಹುಲಿಮನಿ,ವೆಂಕಟೇಶ ಬೇಟೆಗಾರ,ಕೆ.ಎಮ್.ಪಟೇಲ್,ವೆಂಕಟೇಶ ನಾಯಕ ಬೈರಿಮಡ್ಡಿ,ಶಿವಲಿಂಗ ಹಸನಾಪುರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಸಭೆಯಲ್ಲಿ ರಮೇಶ ದೊರೆ ಆಲ್ದಾಳ,ಅಜ್ಮೀರ್,ನಿಂಗಣ್ಣ ಗೋನಾಲ,ರಾಮಣ್ಣ ಶೆಳ್ಳಿಗಿ,ದುರ್ಗಪ್ಪ ನಾಗರಾಳ,ದಾನಪ್ಪ ಲಕ್ಷ್ಮೀಪುರ,ಮಹ್ಮದ್ ಗೌಸ್ ಸೇರಿದಂತೆ ಅನೇಕರಿದ್ದರು.ಪೇದೆ ಮಹಾಂತೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here