ಗ್ರಾಮೀಣ ಕ್ರೀಡೆಗಳು ದೇಶದ ಸಂಸ್ಕೃತಿಯ ಒಂದು ಅಂಗವಿದ್ದಂತೆ: ಸಂಗನಗೌಡ

0
44

ಸುರಪುರ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭವ್ಯವಾದ ಭಾರತ ದೇಶದಲ್ಲಿ ಹಲವಾರು ಸಂಸ್ಕೃತಿ ಪರಂಪರೆಗಳಿವೆ.ಅದರಂತೆ ದೇಶದ ಸಂಸ್ಕೃತಿಯ ಒಂದು ಅಂಗವಾಗಿ ಗ್ರಾಮೀಣ ಕ್ರೀಡೆಗಳು ಬೆಳೆದು ಬಂದಿವೆ ಎಂದು ಮುಖಂಡ ಸಂಗನಗೌಡ ಬೆಳ್ಳಿ ಮಾತನಾಡಿದರು.

ತಾಲೂಕಿನ ಬೋನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ,ಇಂದು ಕ್ರಿಕೇಟ್,ಫುಟಬಾಲ್ ನಂತಹ ಆಟಗಳ ಹುಚ್ಚಿಗೆ ಬಿದ್ದಿರುವ ಜನತೆ ನಮ್ಮ ದೇಶಿಯ ಸೊಗಡಿನ ಅನೇಕ ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ.ಆದರೆ ಇಲ್ಲಿಯ ಯುವಕ ಸಂಘದಿಂದ ಇಂದು ಕಬ್ಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಸಂತೋಷ ತಂದಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಂತಕ ಶಿವಕುಮಾರ ಅಮ್ಮಾಪುರ ಮಾತನಾಡಿ,ಗ್ರಾಮೀಣ ಕ್ರೀಡೆಗಳಲ್ಲಿ ಕಬ್ಬಡ್ಡಿಗೆ ಮೊದಲ ಸ್ಥಾನವಿದೆ.ಇದನ್ನು ಅರಿತಿರುವ ಶುಭಾಶ್ಚಂದ್ರ ಬೋಸ್ ಯುವಕ ಸಂಘದ ಗೆಳೆಯರು ಗ್ರಾಮೀಣ ಮಟ್ಟದ ಕ್ರೀಡಾಕೂಟ ನಡೆಸುವ ಮೂಲಕ ದೇಶಿ ಕ್ರೀಡೆಗಳನ್ನು ಬೆಳೆಸುವಲ್ಲಿ ಆಸಕ್ತಿ ತೋರಿರುವುದು ಸಂತೋಷದ ಸಂಗತಿಯಾಗಿದೆ.ಇದೇ ರೀತಿಯಾಗಿ ಇನ್ನು ಹೆಚ್ಚೆಚ್ಚು ಕ್ರೀಡಾಕೂಟಗಳು ಸಂಘದಿಂದ ಜರುಗಲಿ.ದೇಶಿ ಕ್ರೀಡೆಗಳು ಉಳಿದಲ್ಲಿ ದೇಶದ ಸಂಸ್ಕೃತಿಯು ಉಳಿಯುತ್ತದೆ,ಬೆಳೆಯುತ್ತದೆ.ಅಂತಹ ಮಹತ್ಕಾರ್ಯ ಸಂಘದಿಂದ ನಡೆಯಲೆಂದು ಹಾರೈಸಿದರು.

ನಂತರ ನಡೆದ ಕಬ್ಬಡ್ಡಿ ಪಂದ್ಯಗಳಲ್ಲಿ ಟಿಪ್ಪು ಬಾಯ್ಸ್ ತಂಡ ಪ್ರಥಮ ಬಹುಮಾನ ಹಾಗು ವೀರಸಾವರ್ಕರ್ ತಂಡ ದ್ವೀತಿಯ ಬಹುಮಾನ ಪಡೆಯಿತು.ವಿಜೇತ ತಂಡಗಳಿಗೆ ನಗದು ಮತ್ತು ಕಪ್‌ಗಳನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಮಾಳಪ್ಪ ಮಾಲಗತ್ತಿ,ಖತಲಸಾಬ್ ತಾಳಿಕೋಟೆ,ಬಸಯ್ಯ ಹಿರೆಮಠ,ಬಸನಗೌಡ ಪೋಲಿಸ್ ಪಾಟೀಲ,ರಮೇಶ ಹವಲ್ದಾರ,ಬಸವರಾಜ ಗುತ್ತೆದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here