ಸುರಪುರ: ನಾರಾಯಣಪುರ ಜಲಾಶಯದಿಂದ ರೈತರ ಹಿಂಗಾರು ಹಂಗಾಮಿಗೆ ಬೇಕಾಗುವಷ್ಟು ನೀರು ಹರಿಸಲು ಅತೀ ಶೀಘ್ರವಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರ ಜಮೀನುಗಳಿಗೆ ಎಪ್ರೀಲ್ ೧೦ ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೋಳ್ಳುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದ ಅವರು, ಆಲಮಟ್ಟಿ ಹಾಗೂ ನಾರಾಯಣಪೂರ ಜಲಶಾಯಗಳಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಿ ಲಭ್ಯವಿದೆ. ಆದರೆ ನಾರಾಯಣಪೂರ ಜಲಾಶಯದಿಂದ ೧೧-೦೩-೨೦೨೦ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದ ರೈತರು ಬೆಳೆದ ನೀರು ಅವಲಂಬಿತ ಬೆಳೆಗಳಾದ ಭತ್ತ, ಹತ್ತಿ, ಶೆಂಗಾ, ಹಾಗೂ ಇನ್ನೀತರ ಬೆಳೆಗಳು ಕಟಾವಿಗೆ ಬರುವುದಿಲ್ಲ.
ಇದರಿಂದ ರೈತರು ತುಂಬಾ ಸಂಕಷ್ಟಕ್ಕೋಳಗಾಗುತ್ತಾರೆ. ಆದ್ದರಿಂದ ರೈತರು ಬೆಳೆದ ಬೆಳಗಳ ಹಿತದೃಷ್ಠಿಯಿಂದ ರೈತರ ಜಮೀನುಗಳಿಗೆ ಕಾಲುವೆಗಳ ಮುಖಾಂತರ ಎಪ್ರೀಲ್ ೧೦ ರವರೆಗೆ ನೀರು ಹರಿಸಬೇಕು. ಮತ್ತು ಅತೀ ಶೀಘ್ರವಾಗಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ರೈತರ ಹಿತಕಾಯುವ ನಿರ್ಣಯ ಕೈಗೊಂಡು ರೈತರಿಗೆ ಅನುಕೂಲಮಾಡಿಕೊಡಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.