ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

0
81

ಚಿಂಚೋಳಿ: ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಆಯ್ದಕ್ಕಿ ಲಕ್ಕಮ್ಮ ಸ್ವಸಹಾಯ ಸಂಘದ ಅಧ್ಯಕ್ಷರಾದ ಸುಮಂಗಲಾ ಕಾಶಿನಾಥ್ ಹುಣಜೆ ಅವರು ಸಾಧಕ ಮಹಿಳೆ ಎಂದು ಗುರುತಿಸಿ ಸನ್ಮಾನಿಸಲಾಯಿತು.

ಇಲ್ಲಿನ ಮಹಿಳಾ ಕಾಲೇಜಿನ ಫೋರಂ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುಮಂಗಲಾ ಅವರು ಸ್ವಸಹಾಯ ಸಂಘದ ಮೂಲಕ ಉದ್ಯೋಗ ಸೃಷ್ಟಿಸಿ ನೂರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆಂದು ಹರ್ಷವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ. ಶ್ರೀಶೈಲ ನಾಗರಾಳ ಅವರು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ಮಹಿಳಾ ಫೋರಂ ನ ಸಂಚಾಲಕಿ ಡಾ. ಮಾಣಿಕಮ್ಮ ಸುಲ್ತಾನಪುರ  ಕಾಲೇಜಿನ ನ್ಯಾಕ್ ಸಂಚಾಲಕರು ಡಾ ಚನ್ನಮಲ್ಲಪ್ಪ ಕಲಬುರ್ಗಿ ಶ್ರೀಮತಿ ಭಾಗ್ಯಶ್ರೀ ಶ್ರೀಮತಿ ಗೀತಾ ಮೈಲವಾರ್ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗ ಅತಿಥಿ ಉಪನ್ಯಾಸಕಿ ದೀಪಾ ಕಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ಸುಧಾ ಸಂಗಡಿಗರು ಪ್ರಾರ್ಥಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗ್ಯಶ್ರೀ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here